ಹಾಸನ : ಹಸಿರು ಮನೆ (ಗ್ರೀನ್ ಹೌಸ್) ಎಂದರೆ ಸೂರ್ಯನ ಬೆಳಕನ್ನು ಒಳಗಡೆ ಬಿಟ್ಟುಕೊಂಡು, ಸಸ್ಯಗಳನ್ನು ಹವಮಾನ ನಿಯಂತ್ರಿತ ಪರಿಸರದಲ್ಲಿ ಬೆಳೆಸುವ ಒಂದು ರಚನೆ.ಗ್ರೀನ್ ಹೌಸ್‌ನಲ್ಲಿ ಹವಮಾನ ಪರಿಸ್ಥಿತಿಗಳನ್ನು ನಿಯಂತ್ರಿಸುವ ಮೂಲಕ, ವರ್ಷಪೂರ್ತಿ ಸಸ್ಯಗಳು, ಹೂವುಗಳು, ತರಕಾರಿಗಳು ಮತ್ತು ಇತರ ಬೆಳೆಗಳನ್ನು ಬೆಳೆಯಬಹುದು ಎಂದು ಶಿಬಿರಾರ್ಥಿನಿಯಾದ ಮೋನಿಕ ರವರು ತಿಳಿಸಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ಗ್ರೀನ್ ಹೌಸ್ ನ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಶ್ರೀ ಶಿವಬಸಪ್ಪ,ಸಹಾಯಕ ಪ್ರಾಧ್ಯಾಪಕರು ಕೃಷಿ ಎಂಜಿನಿಯರಿಂಗ್ ವಿಭಾಗ, ಕೃಷಿ ಮಹಾವಿದ್ಯಾಲಯ ಹಾಸನ ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಹಸಿರು ಮನೆಯನ್ನು (ಗ್ರೀನ್ ಹೌಸ್) ನಿರ್ಮಿಸುವುದರಿಂದ ಆಗುವ ಲಾಭಗಳ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು.ತೋಟಗಾರಿಕೆ ಇಲಾಖೆಯಿಂದ ಹಸಿರು ಮನೆಯನ್ನು ನಿರ್ಮಿಸಲು ಆಗುವ ವೆಚ್ಚಕ್ಕೆ 50%ಸಬ್ಸಿಡಿ ಸಿಗುತ್ತದೆ ಎಂದು ತಿಳಿಸಿದರು.
ಗ್ರೀನ್ ಹೌಸ್ ಅನ್ನು ನಿರ್ಮಿಸಲು ಮಾಡಬೇಕಾದ ಕಾರ್ಯವಿಧಾನಗಳನ್ನು ಹೇಳಿಕೊಟ್ಟರು.ನಂತರ ಗ್ರೀನ್ ಹೌಸ್ ನ ಬಗ್ಗೆ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ರೈತರಲ್ಲಿ ಹಸಿರು ಮನೆಯ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶಿವಬಸಪ್ಪ,ಸಹಾಯಕ ಪ್ರಾಧ್ಯಾಪಕರು ಕೃಷಿ ಎಂಜಿನಿಯರಿಂಗ್ ವಿಭಾಗ, ಕೃಷಿ ಮಹಾವಿದ್ಯಾಲಯ ಹಾಸನ ಮತ್ತು ಕೋರವಂಗಲ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ಕೃಷಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೆಲ್ಲರು ಸಂತೋಷ ವ್ಯಕ್ತಪಡಿಸಿದರು.