ಮೈಸೂರು :- ” ಮನೆಗೆ ಯಾರೆ ಅತಿಥಿಗಳು ಬಂದರು ಮೊದಲು ಕಾಫಿ ಕುಡಿಯುತ್ತೀರಾ.?ಎಂದು ಕೇಳುವ ಮೂಲಕ ಸ್ವಾಗತ ಪಾನೀಯವಾಗಿಯು ಕಾಫಿ ಮಹತ್ವವನ್ನು ಪಡೆದುಕೊಂಡಿದೆ.ಮಲೆನಾಡ ಕಾಫಿ ಬೆಳೆಗಾರರು ಯಾವಾಗಲು ಸಂತೃಪ್ತರಾಗಿರಬೇಕು . ಬೆಲೆಗಳಲ್ಲಿ ಏರಿಳಿತಗಳಿಗೆ ಬೆಳೆಗಾರರು ದೃತಿಗೆಡಬಾರದು.ಎಂದು ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ (ರಿ ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಯವರು ಹುರಿದ ಕಾಫಿ ಬೀಜವನ್ನು ಪುಡಿ ಮಾಡುವುದರೊಂದಿಗೆ ಉದ್ಘಾಟನೆ ಮಾಡಿ ಆಶೀರ್ವಾಚನ ನೀಡುತ್ತಾ ” ಮೈಸೂರು ಅರಸರು ಲೋಕಕಲ್ಯಾಣಕ್ಕಾಗಿ ಅನೇಕ ಅಭಿರುದ್ದಿ ಕೆಲಸಗಳನ್ನು ಅರಸುತ್ತಿಗೆಯಲ್ಲಿ ಮಾಡಿದವರು. ಮೈಸೂರು ಒಡೆಯವರು ನಾಡಿಗೆ ಮಾಡದೆ ಇರುವರು ಅಭಿವೃದ್ಧಿ ಕೆಲಸ ಇಲ್ಲ.ಇಂತಹ ಪವಿತ್ರ ಸನ್ನಿದಿಯಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯ ಮಾಡುತಿರುವುದು ಹೆಮ್ಮೆಯ ವಿಚಾರ.ಕಾಫಿ ಎಂಬುದು ಉತ್ತೇಜನಕಾರಿ ಎಂಬುದಾಗಿ ಕೆಲವು ದೇಶಗಳು ಕಾಫಿಯನ್ನು ನಿಸ್ಕೃಯಮಾಡಿದ್ದವು. ನಂತರ ದಿನಗಳಲ್ಲಿ ಸಂಶೋಧನೆಯಿಂದ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೇದು ಎನ್ನುವ ಉದ್ದೇಶದಿಂದ ಹೇರಿದ ನಿಸ್ಕೃಯವನ್ನು ಹಿಂಪಡೆದು ಕೊಡಿದೆ.ಕಾಫಿ ಬಗ್ಗೆ ಇನ್ನೊಷ್ಟು ಸಂಶೋಧನೆ ನೆಡೆಯಬೇಕು. ಹಾಲು ಮಿಶ್ರಿತವಲ್ಲದ ಕಾಫಿ ಕುಡಿಯುವ ಮೂಲಕ ಅರೋಗ್ಯ ಕಾಪಾಡಿಕೊಳ್ಳಬೇಕು. ಜಗತ್ತಿನ ಹೆಚ್ಚು ರಫ್ತು ಮಾಡುವುದರಲ್ಲಿ 6 ನೇ ಸ್ಥಾನ ಕಾಫಿಗೆ ಇದೆ.ಇದರಲ್ಲಿ ಹಾಸನ ಕಾಫಿ ಬೆಳೆಗಾರರು ಕೂಡ ಪಾಲುದಾರರಿದ್ದಾರೆ ಎಂಬುದೆ ಖುಷಿಯ ವಿಚಾರ. ಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರಿಗೆ ಒಳ್ಳೆದಾಗಲಿ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಸೋಮೇಶ್ವರನಾಥ ಸ್ವಾಮೀಜಿ ಅಶ್ರಿವಾಚನ ನೀಡುತ್ತಾ ” ನಾವು ಪ್ರತಿನಿತ್ಯ ಕಾಫಿ ಸೇವನೆಯಿಂದ ದೇಹ ಹಾಗೂ ಮನಸ್ಸನ್ನು ದೃಢವಾಗಿ ಇಟ್ಟು ಕೊಳ್ಳೋಣ. ಕಾಫಿ ಎಂಬುದು ಮನುಷ್ಯನಿಗೆ ಬೆಳಗ್ಗೆ ಎದ್ದ ತಕ್ಷಣ ನೆನಪು ಬರುವಂಥದ್ದು . ಇದು ಮನುಷ್ಯನಿಗೆ ಶಕ್ತಿ ಹಾಗೂ ಉಲ್ಲಾಸ ನಿಡುವ ಸಸ್ಯ ಜನ್ಯ. ಮನುಷ್ಯ ನಿಗೆ ರೋಗವನ್ನು ದೂರ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲ್ಲ. ನಾವು ಎಲ್ಲವನ್ನು ಮಿತವಾಗಿ ಉಪಯೋಗೋಸಬೇಕು ಅದು ಒಳ್ಳೇದು . ಅದೆರೀತಿ ಮಿತವಾಗಿ ಕಾಫಿಯನ್ನು ಉಪಯೋಗಿಸುವುದರಿಂದ ಒಳ್ಳೆಯದು .ಎಂದರು.
ಶಾಸಕರಾದ ಸಿಮೆಂಟ್ ಮಂಜುನಾಥ್ ಮಾತನಾಡುತ್ತಾ ” ಒಂದು ಕಡೆ ಹವಾಮಾನ ಬದಲಾವಣೆಗಳಿಂದ ಮತ್ತೊಂದು ಕಡೆ ಕಾಡನೆ ಸಮಸ್ಯೆ ಕಾಫಿ ಬೆಳೆಗಾರರು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದರು ಕೂಡ ಬೆಳೆಗಾರರಿಗೆ ಸ್ಪಂದಿಸುವ ಕೆಲಸವಾಗಿಲ್ಲ. ದೇಶದ ರಫ್ತಿನಲ್ಲಿ 12 ರಿಂದ 13 ಸಾವಿರ ಕೋಟಿಯನ್ನು ಈ ಕಾಫಿ ಉದ್ಯಮ ದೇಶಕ್ಕೆ ಕೊಡುತ್ತಾ ಬಂದಿದ್ದರು ಕೂಡ ಇದುವರೆಗೂ ಯಾವ ಸರ್ಕಾರವೂ ಕೂಡ ಈ ಕಾಫಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡದೇ ಇರುವುದು ವಿಪರ್ಯಾಸವೇ ಸರಿ .
ಈ ಭಾಗದ ರೈತರಿಗೆ ತೊಂದರೆ ಕೊಡುವ ಯಾವ ಕಾನೂನನ್ನು ನಾವು ಒಪ್ಪುವುದಿಲ್ಲ. ಈ ಭಾಗದ ಜನರಿಗೆ ಪರಿಸರವನ್ನು ಉಳಿಸುವುದು ಹಾಗೂ ಕಾಡನ್ನು ಬೆಳೆಸುವುದು ಯಾರು ಹೇಳಿಕೊಡಬೇಕಾಗಿಲ್ಲ. ಅಷ್ಟರಮಟ್ಟಿಗೆ ಪರಿಸರವನ್ನು ಪ್ರೀತಿಸಿ ಅದರೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ.ಪರಿಸರವನ್ನು ಉಳಿಸುವರಿಗೆ ಸರ್ಕಾರದಿಂದ ತೊಂದರೆ ಹೆಚ್ಚು.ಕಾಫಿಯನ್ನು ಈ ಭಾಗದ ಬೆಳೆಗಾರರು ಕೇವಲ ಉದ್ಯಮ ಅಲ್ಲದೆ ಪ್ರೀತಿಯಿಂದ ಬೆಳೆಯುತ್ತಿದ್ದಾರೆ.
ಬೆಳೆಗಾರರ ವಿದ್ಯುತ್ ಬಿಲ್ಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ. ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳಲ್ಲಿ ಸಕಲೇಶಪುರದಿಂದ ಹಿಡಿದು ಪಳಗಿಸಿದ ಆನೆಗಳೇ ಹೆಚ್ಚು ಆಕರ್ಷಣೀಯ. ಕಾರಣ ಅವುಗಳು ದಷ್ಟಪುಷ್ಟ ಹಾಗೂ ಸುಂದರವಾಗಿ ಕಾಣುತ್ತವೆ ಎಂಬ ಮಾತಿದೆ.ಹೆಚ್ಚು ಬೆಳೆಗಾರರು ಇರುವ ಕ್ಷೇತ್ರದಿಂದ ಶಾಸಕನಾಗಿರುವುದು ನಂಗೆ ಹೆಮ್ಮ. ” ಎಂದರು
ನಂತರ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕರಾದ ಡಾ. ಮಂಥರ್ ಗೌಡ ಮಾತನಾಡುತ್ತಾ “ತಿಂಗಳ ಸಂಬಳಕ್ಕೆ ಹಳ್ಳಿ ಬಿಟ್ಟು ನಗರಗಳಿಗೆ ಹೋಗುವರು ವಾಪಸು ಬಂದು ಕಾಫಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ಇಂದು ಬಂದಿದೆ . ಪ್ರಸ್ತುತ ಕಾಫಿ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಎಲ್ಲ ಬೆಳೆಗಾರರು ಒಟ್ಟಾಗಿ ಸಮಸ್ಯೆ ಪರಿಹಾರಕ್ಕೆ ನಿಂತರೆ ಕಂಡಿತಾ ಒಳ್ಳೇದಾಗುತ್ತೆ.ನಂಗೆ ಕೃಷಿಯಲ್ಲಿ ಸಿಗುವ ಖುಷಿ ಯಾವ ರಾಜಕೀಯದಲ್ಲಿ ಸಿಗುವುದಿಲ್ಲ. ಮಹಿಳೆಯರು ಕಾಫಿ ಯಲ್ಲಿ ಏನು ಬೇಕಾದರೂ ಸಾಧನೆ ಮಾಡಬವುದು ಎಂಬುದಕ್ಕೆ ಸಾಕಮ್ಮ ನೇ ಸಾಕ್ಷಿ.”ಎಂದರು
ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಮಾತನಾಡುತ್ತಾ “ನನ್ನ ದಿನಚರಿ ಶುರು ಮಾಡುವುದೇ ಕಾಫಿಯಿಂದ .ನಾನು ಕಾಫಿ ಪ್ರಿಯಳು. ಹಾಗಾಗಿ ನಾನು ಈ ಕಾರ್ಯಕ್ರಮದಲ್ಲಿ ಬಾಗಿ ಆಗಿದ್ದೀನಿ. ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾಫಿ ಪ್ರಿಯರು. ಜೀವವಿಮೆ ಅಡಿಯಲ್ಲಿ ಕಾಫಿ ಸೇರಿಸಬೇಕು ಎಂಬ ಬೇಡಿಕೆ ಹಾಸನ ಜಿಲ್ಲಾ ಪ್ಲಾಂಟರ್ ಸಂಘದ್ದು ಇದನ್ನು ಸರ್ಕಾರದ ಮಟ್ಟದಲ್ಲಿ ತಿಳಿಸುವ ಕೆಲಸವನ್ನು ಮಾಡಲಾಗುವುದು.” ಎಂದರು ಕಾರ್ಯಕ್ರಮದಲ್ಲಿ ಮಲೆನಾಡ ವಾದ್ಯ ಹಾಗೂ ಮಲೆನಾಡ ಸುಗ್ಗಿಕುಣಿತ ನೋಡುಗರನ್ನು ಮನರಂಜನೆ ಕಡಲಲ್ಲಿ ತೆಲಿಸಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಪಾಲ್ಗೊಂಡು ಅತ್ಯಂತ ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಹತ್ತನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಮೈಸೂರಿನಲ್ಲಿ ಆಚರಿಸಿದರು.
ವೇದಿಕೆಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಎ. ಎಸ್. ಪರಮೇಶ್, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ. ಜೆ ದಿನೇಶ್, ಕರ್ನಾಟಕ ಗೋವರ್ಸ್ ಪೆಡರೇಶನ್ (ರಿ ) ಅಧ್ಯಕ್ಷರಾದ ಹೆಚ್. ಟಿ ಮೋಹನ್ ಕುಮಾರ್, ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಿವರಾಜ್,ಭಾರತೀಯ ಕಾಫಿ ಮಂಡಳಿ ಸದಸ್ಯರಾದ ಏನ್. ಬಿ ಉದಯ್ ಕುಮಾರ್, ಶಾಸಕರಾದ ಶ್ರೀವಸ್ತವ ಸೇರಿದಂತೆ ಇದ್ದರು.