ಸಕಲೇಶಪುರ. ಸಕಲೇಶಪುರದಾದ್ಯಂತ ಅಕ್ರಮ ವಲಸಿಗರು ಸಂತೆ, ಮಾರುಕಟ್ಟೆ ಗಳಲ್ಲಿ ಯಾವುದೇ ಪರವಾನಗಿ ಪಡೆಯದೆ ತಮ್ಮ ಮನಸ್ಸೋ ಇಚ್ಛೆ ಎಲ್ಲೆಂದರಲ್ಲಿ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿದ್ದು ಸ್ಥಳೀಯವಾಗಿ ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಸ್ಥಳೀಯ ವರ್ತಕರಿಗೆ ತೊಂದರೆ ಆಗಿದೆ ಈ ಅಕ್ರಮ ವಲಸಿಗರು ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸ್ಥಳೀಯ ವರ್ತಕರ ವ್ಯಾಪಾರಕ್ಕೆ ತೊಂದರೆ ಆಗಿದ್ದು ಜೀವನಕ್ಕೆ ಸಂಕಷ್ಟ ಆಗಿರುತ್ತದೆ.
ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ಕೂಡ ಈ ಅಕ್ರಮ ವಲಸಿಗರದ್ದೇ ಹಾವಳಿ ಹಾಗೆ ಸ್ಥಳೀಯ ವರ್ತಕರು ಪ್ರಶ್ನಿಸಿದ್ದಲ್ಲಿ ಇವರು ಅನುಚಿತ ವರ್ತನೆ ತೋರುತ್ತಿದ್ದಾರೆ. ಆದುದರಿಂದ ಕೂಡಲೇ ಅಕ್ರಮ ವಲಸಿಗರ ಈ ವ್ಯಾಪಾರ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಮಲೆನಾಡು ರಕ್ಷಣಾ ಸೇನೆ ಸಂಸ್ಥಾಪಕ ಅಧ್ಯಕ್ಷ ಸಾಗರ್ ಜಾನೇಕೆರೆ ತಿಳಿಸಿದ್ದಾರೆ.