ಹಾಸನ : ಡೆಂಗ್ಯೂ, ವೈರಸ್ ನಿಂದ ಉಂಟಾಗುವ ಒಂದು ತೀವ್ರವಾದ ಜ್ವರವಾಗಿದ್ದು ಮುಖ್ಯವಾಗಿ ಏಕಕಾಲದಲ್ಲಿ ಸೊಳ್ಳೆಯಿಂದ ಹರಡುವ ರೋಗವಾಗಿದ್ದು ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ ಮೂರ ರಿಂದ ಹದಿನಾಲ್ಕು ದಿನಗಳಲ್ಲಿ ಲಕ್ಷಣ ತೋರುವುದು ಇದರ ಲಕ್ಷಣ , ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ವಿಶಿಷ್ಟ ಚರ್ಮದ ಗುಳ್ಳೆಗಳು ಅಥವಾ ದಡಸಲು/ದದ್ದುಗಳನ್ನು ನೋಡಬಹುದು, ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಮನುಷ್ಯಾರಲ್ಲಿ ಹರಡುತ್ತಿದೆ.
ಆದ ಕಾರಣ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಬಿ.ಎಸ್ಸ್.ಸ್ಸಿ (ಹಾನ್ಸ್) ಕೃಷಿ ವಿಧ್ಯಾರ್ಥಿಗಳ ಕಾರ್ಯಾನುಭವ ಶಿಬಿರದ ಗ್ರಾಮವಾದ ಜೋಡಿಕೃಷ್ಣಾಪುರದಲ್ಲಿ ಡೆಂಗ್ಯೂವಿನ ಬಗ್ಗೆ ಅರಿವನ್ನು ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ , ಶಿಕ್ಷಕರಾದ ಮಂಜೇಗೌಡ, ರಮೇಶ್ ಮತ್ತು ಸುಧಾರಾಣಿ ರವರ ಸಮ್ಮುಖದಲ್ಲಿ ಶಾಲೆಯ ಮಕ್ಕಳಿಗೆ ಡೆಂಗ್ಯೂ ರೋಗದ ಗುಣಲಕ್ಷಣಗಳು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಜಾಗೃತಿ ಮೂಡಿಸಿದರು.