ಹಾಸನ : ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ” ಅಂಗಾಂಶ ಕೃಷಿ ಆಲೂಗೆಡ್ಡೆ ಕುಡಿ ಕಾಂಡ ತಂತ್ರಜ್ಞಾನ” ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಡಾ. ಗೀತಾ ಗೋವಿಂದ ಜೈವಿಕ ತಂತ್ರಜ್ಞಾನ ವಿಭಾಗ, ಕೃಷಿ ಮಹಾವಿದ್ಯಾಲಯ, ಹಾಸನ ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಮಾತಾನಾಡಿದ ಇವರು ಕೃಷಿಯಲ್ಲಿ ಅಂಗಾಂಶ ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಅಂಗಾಂಶ ಕೃಷಿ ಎಂದರೆ ಅತ್ಯಂತ ನಿಯಂತ್ರಿಯಕ ಮತ್ತು ಆರೋಗ್ಯಕರ ಪರಿಸ್ಥಿತಿಗಳಲ್ಲಿ ಪರೀಕ್ಷಾ ಟ್ಯೂಬ್ ನಲ್ಲಿ ಸಸ್ಯದ ಭಾಗ ಅಥವಾ ಗುಂಪಿನ ಕೋಶವನ್ನು ಬಳಸಿಕೊಂಡು ಸಸ್ಯದ ಪ್ರಸರಣವನ್ನು ಅಂಗಾಂಶ ಕೃಷಿ ಎಂದು ಕರೆಯುತ್ತಾರೆ. ಹಾಗೂ ಅಂಗಾಂಶ ಕೃಷಿ ಆಲೂಗೆಡ್ಡೆ ಕುಡಿ ಕಾಂಡದ ಉಪಯೋಗಗಳು, ಅನುಕೂಲಗಳನ್ನು ತಿಳಿಸಿದರು. ಹಾಗೂ ಒಂದು ಗಿಡಕ್ಕೆ ಬೇಕಾದ ವೆಚ್ಚ ಹಾಗು ಅಂಗಾಂಶ ಕೃಷಿ ಆಲೂಗೆಡ್ಡೆ ಗಿಡವನ್ನು ನಿರ್ವಯಿಸುವ ಬಗ್ಗೆ ತಿಳಿಸಿಕೊಟ್ಟರು.

ಹಾಗೂ ಕೃಷಿ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೆಲ್ಲರೂ ಸಂತೋಷ ವ್ಯಕ್ತಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *