ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಹೋಬಳಿ ಕೆಸಗುಲಿ ಗ್ರಾಮದಲ್ಲಿ ಈ ದಿನ ಸಂಜೆ ಒಂದು ಮೂಕ ಪ್ರಾಣಿ ಜಿಂಕೆಯನ್ನು ಸುಮಾರು 15ಕ್ಕೂ ಹೆಚ್ಚು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ದಾಳಿಮಾಡಿ ಕಚ್ಚಿ ತುಂಬಾ ಗಾಯವಾಗಿರುತ್ತದೆ.

ಇದನ್ನು ಕಂಡ ಕೆಸಗುಲಿ ಗ್ರಾಮದ ನನ್ನ ಸ್ನೇಹಿತ ಮಿತ್ರರು ಕೂಡಲೇ ಅರಣ್ಯ ಸಿಬ್ಬಂದಿ ವರ್ಗದವರಿಗೆ ಕರೆ ಮಾಡಿ ಚಿಕಿತ್ಸೆಗೆ ಕಳುಹಿಸಿದ್ದಾರೆ. ಅದು ಸಾವು ನೋವಿನ ಮಧ್ಯೆ ನೋವನ್ನು ಅನುಭವಿಸುತ್ತಿದೆ.

ನಂತರ ತಾಲ್ಲೂಕಿನ ಅರಣ್ಯ ಅಧಿಕಾರಿಗಳಾದ ಮಂಜುನಾಥ್ ಹಾಗೂ ಜಯಸ್ವಾಮಿಯವರು ಘಟನೆಯನ್ನು ಪರಿಶೀಲನೆ ಮಾಡಿ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿದ್ದಾರೆ.

ಕಳೆದ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬಿಳಿಗೆರೆ ಹಾಗೂ ಕೆಸಗುಲಿ ಯಲ್ಲಿ ಇದೇ ಘಟನೆ ಸಂಭವಿಸಿದ್ದು ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಜಿಂಕೆಯು ಮೃತಪಟ್ಟಿರುತ್ತದೆ.

ಈಗಾಗಲೆ ಹಲವು ಜಾನುವಾರುಗಳನ್ನು ಬಲಿ ಪಡೆದಿದ್ದು ಇನ್ನಾದರೂ ಉದೇವಾರ ಪಂಚಾಯಿತಿಯ ಸಿಬ್ಬಂದಿಗಳು ಬೀದಿ ನಾಯಿಗಳ ಬಗ್ಗೆ ಸೂಕ್ತ ಕ್ರಮವನ್ನು ವಹಿಸಿ ವನ್ಯಜೀವಿಗಳಿಗೆ ಬದುಕಲು ಬಿಡಿ ಎಂದು ಜೆಡಿಎಸ್ ಮುಖಂಡರಾದ *ದಿಲೀಪ್ ಕೆಸಗುಲಿ* ಅವರು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *