ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಜೈವಿಕ ಗೊಬ್ಬರಗಳು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಭರತ್ ಪ್ರಸಾದ್ ಸಿ ಟಿ ಹಾಗೂ ಡಾ.ವಾಘ್ಮರೆ ವಿಜಯಕುಮಾರ್ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನದ ವಿಧ್ಯಾರ್ಥಿಗಳು ಜೈವಿಕ ಗೊಬ್ಬರಗಳು ಎಂದರೇನು ಮತ್ತು ಅದರಿಂದಾಗುವ ಉಪಯೋಗಗಳು ಏನು ಎಂಬುದನ್ನು ನೆರೆದ ಎಲ್ಲಾ ರೈತರಿಗೆ ಅರ್ಥೈಸಿದರು.
ನಂತರದಲ್ಲಿ ಜೈವಿಕ ಗೊಬ್ಬರಗಳು ಬೆಳೆಗೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.
ಜೈವಿಕ ಗೊಬ್ಬರಗಳು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂಬುದನ್ನು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು,ಪ್ರಗತಿ ಪರ ರೈತರು,ರೈತಮಹಿಳೆಯರು,ಹಾಗೂ ಕೆ ಹೊಸಹಳ್ಳಿಯ ಎಲ್ಲಾ ಜನಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು