ಹಾಸನ : ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ತೆಂಗು ಬೆಳೆಯ ವಿಚಾರ ಸಂಕಿರಣ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಪವನ್ , ರೋಹಿತ್, ಜಯಶ್ರೀ, ನಿತ್ಯ ಹಾಗೂ ಸೀಮಾ ರವರು ತೆಂಗಿನ ಸಸಿಯನ್ನು ನೆಡುವುದರಿಂದ ಹಿಡಿದು,ತೆಂಗು ಬೆಳೆಯಲ್ಲಿನ ರೋಗ ಕೀಟಗಳ ನಿರ್ವಹಣೆ,ತೆಂಗಿಗೆ ಬೇಕಾದ ಪೋಷಕಾಂಶಗಳ ನಿರ್ವಹಣೆ ಹಾಗೂ ತೆಂಗು ಬೆಳೆಯ ಉಪಯೋಗಗಳ ಕುರಿತು ಗ್ರಾಮಸ್ಥರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು.
ಪ್ರಸ್ತುತ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಅನಿತಾ, ಸಹಾಯಕ ಪ್ರಾಧ್ಯಪಕರು, ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಿಕ ಶಾಸ್ತ್ರ ವಿಭಾಗ,ಕೃಷಿ ಮಹಾವಿದ್ಯಾಲಯ ಹಾಸನ ರವರು ಮಾತನಾಡಿ ತೆಂಗನ್ನು ಬೆಳೆಯಲು ಬೇಕಾದ ಮಣ್ಣು ಹಾಗೂ ರಸಸಾರ ಆಧಾರಿತ ಪೋಷಕಾಂಶಗಳ ಉಪಯೋಗಗಳ ಕುರಿತು ತಿಳಿಸಿಕೊಟ್ಟರು.
ನಂತರ ಡಾ. ಚೆನ್ನಕೇಶವ, ಸಹಾಯಕ ಪ್ರಾಧ್ಯಾಪಕರು ಸಸ್ಯ ರೋಗಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಹಾಸನ ರವರು ಮಾತನಾಡಿ ತೆಂಗಿನಲ್ಲಿ ಕಂಡುಬರುವ ರೋಗಗಳಾದ ಕಾಂಡ ರಸ ಸೋರುವಿಕೆ, ಅಣಬೆ ರೋಗ ,ಸುಳಿ ಕೊಳೆರೋಗ, ಎಲೆ ಚುಕ್ಕಿ ರೋಗಗಳ ನಿಯಂತ್ರಿಸುವ ಕ್ರಮಗಳ ಬಗ್ಗೆ ಮತ್ತು ರೋಗಗಳು ಹರಡುವ ಮುನ್ನವೇ ತಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ನಂತರ ಡಾ. ಪ್ರಮೋದ್ ಜಿ, ಸಹಾಯಕ ಪ್ರಾಧ್ಯಾಪಕರು ಬೇಸಾಯಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ರವರು ನೈಸರ್ಗಿಕ ಹಾಗೂ ಸಾವಯವ ಕೃಷಿಯಲ್ಲಿ ತೆಂಗಿನ ರೋಗ , ಕೀಟಗಳ ನಿರ್ವಹಣೆ ಕುರಿತು ಹೇಳಿದರು ಮತ್ತು ಗ್ರಾಮಸ್ಥರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಮೂಲಕ ರೈತರಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಕೋರವಂಗಲದ ಸರ್ಕಾರಿ ಶಾಲಾ ಮಕ್ಕಳು ತಮ್ಮ ಅದ್ಭುತವಾದ ನೃತ್ಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು.ಕಾರ್ಯಕ್ರಮವು ಸುಧೀರ್ಘವಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಡಾ. ಪ್ರಮೋದ್ ಜಿ, ಸಹಾಯಕ ಪ್ರಾಧ್ಯಾಪಕರು ಬೇಸಾಯಶಾಸ್ತ್ರ ವಿಭಾಗ, ಡಾ. ಅನಿತಾ, ಸಹಾಯಕ ಪ್ರಾಧ್ಯಪಕರು, ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಿಕ ಶಾಸ್ತ್ರ ವಿಭಾಗ,ಡಾ. ಚೆನ್ನಕೇಶವ, ಸಹಾಯಕ ಪ್ರಾಧ್ಯಾಪಕರು ಸಸ್ಯ ರೋಗಶಾಸ್ತ್ರ ವಿಭಾಗ, ಡಾ. ಗಗನ , ಸಹಾಯಕ ಪ್ರಾಧ್ಯಾಪಕರು,ಕೃಷಿ ಅರ್ಥಶಾಸ್ತ್ರ ವಿಭಾಗ ಮತ್ತು ಡಾ. ಹರ್ಷಿತ ,ಸಹಾಯಕ ಪ್ರಾಧ್ಯಾಪಕರು ಕೃಷಿ ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋರವಂಗಲದ ಮಕ್ಕಳು,ಅಂತಿಮ ವರ್ಷದ ಕೃಷಿ ಶಿಬಿರಾರ್ಥಿಗಳು ಹಾಗೂ ಎಲ್ಲಾ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕೃಷಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಈ ಉಪಯುಕ್ತವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೆಲ್ಲರೂ ಬಹಳ ಸಂತೋಷ ವ್ಯಕ್ತಪಡಿಸಿದರು.