ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ
ಹಾಸನ: ಜೋಡಿಕೃಷ್ಣಾಪುರದಲ್ಲಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ ಕಾರ್ಯಕ್ರಮವನ್ನು ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ತಮ್ಮ ಡೀನ್ ರವರಾದ ಡಾ.ಮುನಿಸ್ವಾಮಿಗೌಡ ಹಾಗೂ ತಮ್ಮ ರಾವೆ ಶಿಬಿರದ ಸಂಯೋಜಕರಾದ ಡಾ.ಶಂಕರ.ಎಂ.ಹೆಚ್ ಹಾಗೂ ಸಹವರ್ತಿ ಸಂಯೋಜಕರಾದ ಡಾ.ಪ್ರಮೋದ್, ಡಾ.ರೇಖಾ ಮತ್ತು ಡಾ.ಸದಾಶಿವನಗೌಡರೊಂದಿಗೆ, ಸರ್ಕಾರಿ ಪ್ರಾಥಮಿಕ ಶಾಲೆ ಜೋಡಿಕೃಷ್ಣಾಪುರದ ಶಿಕ್ಷಕರಾದ ಸುಧಾಮಣಿ,ರಮೇಶ್ ಹಾಗೂ ಮಂಜೇಗೌಡರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ವಿಶ್ವಪರಿಸರ ದಿನದ ಅಂಗವಾಗಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು “ತಾಯಿಯ ಹೆಸರಿನಲ್ಲಿ ಒಂದು ವೃಕ್ಷ” ಅಭಿಯಾನಕ್ಕೆ ಚಲನೆ ನೀಡಿದ್ದರು.
ಭಾರತ ಮತ್ತು ಜಗತ್ತಿನಾದ್ಯಂತ ಪ್ರತಿಯೊಬ್ಬರೂ ತಮ್ಮ ತಾಯಿಗೆ ಕೊಡುಗೆ ನೀಡಬೇಕು, ಹೀಗೆ ಪ್ರತಿಯೊಬ್ಬರಿಗೂ ಗಿಡವೊಂದನ್ನು ನೀಡುವಂತೆ ಕರೆ ನೀಡಿದ್ದರು. ಆದ್ದರಿಂದ ತಾಯಿಯಾದ ಪ್ರಕೃತಿಯನ್ನು ರಕ್ಷಿಸುವ ಮತ್ತು ಸುಸ್ಥಿರ ಜೀವನಶೈಲಿಯ ಆಯ್ಕೆಗಳನ್ನು ಮಾಡುವ ನಮ್ಮ ಬದ್ಧತೆಗೆ ಅನುಗುಣವಾಗಿ ಗಿಡವನ್ನು ನೆಟ್ಟಿದೇವೆ.”ತಾಯಿಯ ಹೆಸರಿನಲ್ಲಿ ಒಂದು ವೃಕ್ಷ, ತಾಯಿಯ ಪ್ರೀತಿಯ ಮತ್ತು ಕಾಳಜಿಯ ಸಂಕೇತವಾಗಿದೆ.
ತಾಯಿ ಎಂದರೆ ಕೇವಲ ಜೀವವನ್ನು ನೀಡುವವಳಲ್ಲ, ಆದರೆ ಜೀವನದ ಪ್ರತಿಯೊಂದು ಹಂತದಲ್ಲಿ ನಮ್ಮನ್ನು ಬೆಂಬಲಿಸುವ, ಮಾರ್ಗದರ್ಶನ ಮಾಡುವ ವ್ಯಕ್ತಿಯಾಗಿದ್ದು ಅವಳ ಹೆಸರಲ್ಲಿ ಒಂದು ವೃಕ್ಷ” ಎಂದು ಹಾಸನ ಕೃಷಿ ಕಾಲೇಜಿನ ಡೀನ್ ರವರದ ಡಾ.ಮುನಿಸ್ವಾಮಿಗೌಡರವರು ಈ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.