ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಗ್ರಾಮಸಭೆಯು ದಿನಾಂಕ :- 08-11-2024ನೇ ಶುಕ್ರವಾರ 10.30 ಕ್ಕೆ ವಳಲಹಳ್ಳಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನೆಡೆಯಲಿದೆ.

ಕಳೆದ ಒಂದು ವರ್ಷದಿಂದ ಯಾವುದೇ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಗಳು ನಡೆಯದೇ ಇದ್ದು, ಹಾಗೂ 15 ನೇ ಹಣಕಾಸು ಹಾಗೂ ನೆರೆಗ ಯೋಜನೆಯಲ್ಲಿ ಅನೇಕ ಅವ್ಯವಹಾರಗಳು ಗ್ರಾಮಪಂಚಾಯಿತಿಯಲ್ಲಿ ನಡೆದಿರುವ ಬಗ್ಗೆ ಸಾರ್ವಜನಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಕಂಡುಬದಿದೆ.

ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಅಲ್ಲದೆ ಎಲ್ಲಾ ವಿಭಾಗದ ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಜರಾಗಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿ ವಿನಂತಿ.

ಈ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗೆ ತಾಲ್ಲೂಕು ಮಟ್ಟದ 26 ಇಲಾಖೆಯತಾಲ್ಲೂಕು ಅಧಿಕಾರಿಗಳು ಈ ಗ್ರಾಮಸಭೆಗೆ ಹಾಜರಿರಬೇಕು ಇಲ್ಲವಾದರೆ ಆ ದಿನ ಗ್ರಾಮಸ್ಥರು ಮತ್ತು ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರ ಪರವಾಗಿ ವಳಲಹಳ್ಳಿ ವಿರೇಶ್ ಒತ್ತಾಯಿಸಿರುತ್ತಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed