ಆಲೂರು : ಪ್ರಥಮ ದರ್ಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಪಾಳ್ಯ ಹೋಬಳಿಯ ಹಳೆಪಾಳ್ಯ ಗ್ರಾಮದಲ್ಲಿ ಇಂದು ಉದ್ಘಾಟನೆಗೋಂಡಿತು
ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಪಾಳ್ಯ ಗ್ರಾಮಪಂಚಾಯತ್ ಪ್ರಥಮ ಪ್ರಜೆ ಅಧ್ಯಕ್ಷರಾದ ಭವ್ಯ ಪುರುಷೋತ್ತಮ ರವರು ಉದ್ಘಾಟಿಸಿ ಉದ್ಘಾಟನಾ ನುಡಿಗಳನ್ನು ನುಡಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಪಿ ಎಲ್ ನಿಂಗರಾಜು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪುಟ್ಟರಾಜು,ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಸಿ ಡಿಸಿ ಸದಸ್ಯರು ಆದ ಬಾಲಕೃಷ್ಣ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾದಿಕಾರಿ ಪುರುಷೋತ್ತಮ್, ಉಪನ್ಯಾಸಕರಾದ ಮೋಹನ್, ನಟರಾಜ್, ರಮೇಶ್, ಹಳೆ ಪಾಳ್ಯ ಗ್ರಾಮದ ಚರಣ್ ಹಾಗೂ ಹಳೆಪಾಳ್ಯ ಗ್ರಾಮದ ಗ್ರಾಮಸ್ಥರು, ಹಾಗೂ 50 ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು