ಸಕಲೇಶಪುರ : ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಹಳೇಬಸ್ ನಿಲ್ದಾಣದ ಬಳಿ ಜಮಾವಣೆಗೊಂಡ ತಾಲ್ಲೂಕು ಬಿಜೆಪಿ ಮಂಡಲ ಕಾರ್ಯಕರ್ತರು ಕಾಂಗ್ರೇಸ್ ಸರ್ಕಾರದ ಹಿಂದೂವಿರೋಧಿ ನಡೆ ಮತ್ತು ವಕ್ಪ್ ಮಂಡಲಿಯು ನಡೆಸುತ್ತಿರುವ ಆಸ್ತಿ ಕಬಳಿಕೆ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಮಿನಿ ವಿಧಾನಸೌದದ ವರೆಗೆ ಕಾಲ್ನೆಡಿಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಪ್ರಧಾನಕಾರ್ಯದರ್ಶಿಗಳಾದ ಮಧು ಬೊಮ್ಮನಕೆರೆ ಮತ್ತು ಅಗ್ನಿ ಸೋಮಶೇಖರ್ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ವಕ್ತಾರ ಸಾ.ಸು ವಿಶ್ವನಾಥ್ ಮಾಜಿ ಮಂಡಲ ಅದ್ಯಕ್ಷ ಡಿ ರಾಜ್‌ಕುಮಾರ್ ,ನಗರ ಅಧ್ಯಕ್ಷ ದಿಂಬು ಲೋಕೇಶ್ ಯುವ ಮೋರ್ಚಾ ಅಧ್ಯಕ್ಷ ನಿಕಿಲ್, ಶಕ್ತಿ ಕೇಂದ್ರ ಮತ್ತು ಬೂತ್ ಅಧ್ಯಕ್ಷರುಗಳು ಮಹಿಳಾ ಮೋರ್ಚಾ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed