ಅರಸೀಕೆರೆ : ಸಮಾಜದಲ್ಲಿ ಮನುಷ್ಯ ರಾಗ ದ್ವೇಷ ಅಸೂಯೆ ಹಾಗೂ ಸಂಕುಚಿತ ಮನೋಭಾವ ಬಿಟ್ಟು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಗ್ರಾಮಗಳ ಅಭಿವೃದ್ಧಿ ಜೊತೆಗೆ ತಮ್ಮ ಬದುಕು ಸಹ ಹಸನಾಗುತ್ತದೆ ಎಂದು ಮಾಡಾಳು ಶ್ರೀ ರುದ್ರಮುನಿ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು
ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ಮಠದವತಿಯಿಂದ ಆಯೋಜಿಸಿದ್ದ ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘ ಉದ್ಘಾಟನೆ ಮತ್ತು ಮಠದ ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ 18ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ನಮ್ಮದು ಜಾತ್ಯಾತೀತ ಮಠವಾಗಿದ್ದು ಧಾರ್ಮಿಕ ಕ್ಷೇತ್ರ ಸೇರಿದಂತೆ ವಿದ್ಯಾ ಸಂಸ್ಥೆ ಜೊತೆಗೆ ಸಮಾಜ ಬಾಂಧವರ ಆಶಯದಂತೆ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತಂದು ಇಂದು ಉದ್ಘಾಟನೆ ಮಾಡಿದ್ದೇವೆ ಗ್ರಾಮೀಣ ಪ್ರದೇಶದಲ್ಲಿ ಸಮಾಜದ ಜೊತೆಗೆ ರೈತರಿಗೂ ಸದುಪಯೋಗವಾದರೆ ಆರ್ಥಿಕ ಉನ್ನತಿ ಒಂದಬಹುದು ಎಂದು ಸ್ವಾಮೀಜಿ ತಿಳಿಸಿದರು
ತಾಲೂಕಿನಲ್ಲಿ ಸಾಧು ವೀರಶೈವ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ರಾಜಕೀಯ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಸದೃಢ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಆದ್ದರಿಂದ ಮುಂದಿನ ದಿನಮಾನಗಳಲ್ಲಾದರೂ ಸಮಾಜದ ಹಿರಿಯರು ಯುವ ಸಮುದಾಯ ತಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗಿರಿಸಿ ಒಗ್ಗೂಡಿ ಕೆಲಸ ಮಾಡುತ್ತಾ ಸಂಘಟಿತರಾದರೆ ಸರ್ಕಾರಗಳಿಂದ ಹೆಚ್ಚಿನ ಸೌಲಭ್ಯ ಗಳನ್ನು ಪಡೆಯಬಹುದು ಎಂದು ಸ್ವಾಮೀಜಿ ಪ್ರತಿಪಾದಿಸಿದರು
ಜನವರಿ 12ರಂದು ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸಂಸ್ಮಾಣೋತ್ಸವ ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು ರಾಜಕಾರಣಿಗಳು ಶಾಸಕರು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು
ನೂತನ ಸಹಕಾರ ಸಂಘದ ಬಗ್ಗೆ ಉಪಾಧ್ಯಕ್ಷ ಮರುಳಸಿದ್ದ ಸ್ವಾಮಿ ನಿರ್ದೇಶಕರಾದ ಎಸ್ ಎನ್ ಗಂಗಾಧರ್ ಶಿಕ್ಷಕರಾದ ಕುಮಾರ್ ಓಂಕಾರ ಮೂರ್ತಿ ಸಮಾಜದ ಮುಖಂಡರಾದ ರಾಂಪುರ ಆರ್‌ಎಂ ಶೇಖರಪ್ಪ ಡಾ ಮಧು ಅನಿಲ್ ಮಾಡಳು ಗ್ರಾಮ ಪಂಚಾಯತಿ ಅಧ್ಯಕ್ಷ ಯೋಗೀಶ್ ಗ್ರಾಮ ಪಂ ಸದಸ್ಯ ತುಂಬಾ ಪುರ ನವೀನ ಮುಖಂಡರಾದ ಕೊಡ್ಲಿ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.