ಸಕಲೇಶಪುರ :- ತಾಲ್ಲೂಕಿನ ಕುರುಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡ್ಲಹಳ್ಳಿ ಹೊರಟಿ ಗ್ರಾಮದ ಪರಿಶಿಷ್ಟ ಜಾತಿಯ 4 ಹಾಗೂ ಇತರೆ ಜಾತಿಯ 2 ಕುಟುಂಬ ಸೇರಿದಂತೆ 6 ಕುಟುಂಬಗಳಿದ್ದು ಇದುವರೆಗೂ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಇದರ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಿ ಒಂದುವರೆ ವರ್ಷಗಳಾದರೂ ಕೂಡ ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸವನ್ನು ಮಾಡಿರಲಿಲ್ಲ.ಇದರಿಂದ ನೊಂದ ಗ್ರಾಮಸ್ಥರೆಲ್ಲ ವಿವಿಧ ಸಂಘಟನೆಗಳ ಮೂಲಕ ನಾಳೆ ದಿನಾಂಕ 20-12-2024 ನೇ ಶುಕ್ರವಾರದಂದು ವಳಲಹಳ್ಳಿ ಕೂಡಿಗೆಯಲ್ಲಿ ಬೆಳಗ್ಗೆ 11 ಗಂಟೆಗೆ ಚೆಸ್ಕಾಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *