ಸಕಲೇಶಪುರ : ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ದಿವಂಗತ ರೊ.ಡಾ.ಮೋಹನ್‌ದಾಸ್ ಶೆಟ್ಟಿ ಅವರ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ಕೌಡಳ್ಳಿಯ ವಿಶೇಷ ಚೇತನರ ಶಾಲೆಯಲ್ಲಿ ಇಂದು ಏರ್ಪಡಿಸಲಾಗಿತ್ತು.
ಡಾ.ಮೋಹನ್‌ದಾಸ್ ಶೆಟ್ಟಿ ಅವರ ಈ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಅವರ ಕುಟುಂಭಸ್ಥರು ವಿವಿದ ಸಂಘ ಸಂಸ್ಥೆಗಳ ಮುಖಂಡರು ಭಾಗಿಯಾಗಿ ಡಾಕ್ಟರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ ಡಾ.ಮೋಹನ್‌ದಾಸ್ ಶೆಟ್ಟಿ ಅವರು ನಮ್ಮೆಲ್ಲರ ಹಿರಿಯರಾಗಿದ್ದರು ಅವರು ಸದಾ ಸಮಾಜದ ಒಳಿತನ್ನು ಬಯಸುತ್ತಿದ್ದ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು ಅವರ ನಡೆಯನ್ನು ನಾವೆಲ್ಲ ಇಂದು ಪಾಲಿಸಬೇಕು ಎಂದರು.
ಡಾ.ಮೋಹನ್‌ದಾಸ್ ಶೆಟ್ಟಿ ಅವರ ಶ್ರೀಮತಿ ಚೆನ್ನವೇಣಿ ಎಂ ಶೆಟ್ಟಿ ಮಾತನಾಡಿ ಡಾಕ್ಟರ್ ಅವರಿಗೆ ಮಕ್ಕಳೆಂದರೆ ಬಹಳ ಇಷ್ಟಪಡುತ್ತಿದ್ದರು ಅದರಲ್ಲೂ ರೋಟರಿ ಶಾಲೆಯ ವಿಶೇಷ ಚೇತನ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ ಅವರಿಗಿತ್ತು ಇಂದು ಅವರ ಒಂದು ವರ್ಷದ ಪುಣ್ಯಸ್ಮರಣೆಯನ್ನು ಆ ಮಕ್ಕಳೊಂದಿಗೆ ಆಚರಿಸುತ್ತಿದ್ದು ಅವರ ಆತ್ಮಕ್ಕೆ ಇದರಿಂದ ಖುಷಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮೋಹನ್‌ದಾಸ್ ಶೆಟ್ಟಿ ಅವರ ಕುಟುಂಭಸ್ಥರು, ರೋಟರಿ ಸಂಸ್ಥೆಯ ಎಲ್ಲಾ ವಿಭಾಗಗಳ ಅದ್ಯಕ್ಷರು ಪದಾಧಿಕಾರಿಗಳು, ಹಿತೈಷಿಗಳು ರೋಟರಿ ಶಾಲೆಯ ಸಿಬ್ಬಂದಿಗಳು, ಮಕ್ಕಳು ಶ್ರದ್ಧಾಂಜಲಿ ಸಭೆಯಲ್ಲಿ ಹಾಜರಿದ್ದು ಶ್ರದ್ಧಾಂಜಲಿ ಸಭೆಗೆ ಬಂದಂತಹ ಎಲ್ಲರಿಗೂ ಊಟ ಬಡಿಸುವ ಮೂಲಕ ಶ್ರದ್ಧಾಂಜಲಿ ಸಭೆಯನ್ನು ಯಶಸ್ವಿಗೊಳಿಸಿದರು.