
ಹೊಟ್ಟೆಯ ಪಾಡಿಗಾಗಿ ಉತ್ತರ ಭಾರತದಿಂದ ಬಂದಿರುವ ವಲಸಿಗರೊಂದಿಗೆ ಅವರ ಭಾಷೆಯಲ್ಲಿ ವ್ಯವಹರಿಸಿ ಖುಷಿಪಡಿಸುವುದಕ್ಕಿಂತ ಕನ್ನಡ ಭಾಷೆಯಲ್ಲಿ ಮಾತನಾಡಿ ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು, ನಮ್ಮ ಭಾಷೆ ಅವರಿಗೆ ಸವಿಹೂರಣದಂತೆ ರುಚಿಸಬೇಕು, ಹಾಗಾದಾಗ ನಮ್ಮ ಭಾಷೆಯ ಘನತೆ ಹೆಚ್ಚಿ ಅವರಿಗೂ ಇಲ್ಲಿನ ನೆಲಗಟ್ಟನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ” ಎಂದು ಹಾಸನ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಶ್ರೀ ರಘು ಪಾಳ್ಯ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಆಲೂರು ತಾಲೂಕಿನ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯ ವೇದಿಕೆಯು ಏರ್ಪಡಿಸಿದ್ದ ಕನ್ನಡರಾಜ್ಯೋತ್ಸವ ಸಮಾರೋಪ ಸಮಾರಂಭ ಹಾಗೂ ವೇದಿಕೆಯ ರಜತೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡ ಭಾಷೆಗಿರುವ ಹಿರಿಮೆ ಎರಡೂವರೆ ಸಾವಿರ ವರ್ಷದ್ದು, “ಇಲ್ಲಿನ ಸಾಹಿತ್ಯ, ಕಲೆ, ಸಂಸ್ಕೃತಿ, ವ್ಯಾಕರಣ, ಜಗತ್ತಿನ ಯಾವ ಭಾಷೆಯಲ್ಲೂ ಈ ಮಟ್ಟಿಗೆ ಕಾಣಲಾಗದು, ಕನ್ನಡ ನೆಲದಲ್ಲಿ ಹುಟ್ಟಿರುವ ನಾವೇ ಧನ್ಯರು” ಎನ್ನುತ್ತಾ, “ಸಂಘವೊಂದು ಇಪ್ಪತ್ತೈದು ವರ್ಷಗಳನ್ನು ಸರಾಗವಾಗಿ ಪೂರೈಸುವುದು ಸುಲಭದ ಮಾತಲ್ಲ, ಆದರೆ ಈ ಮಂಗಳ ಕಲಾ ಸಾಹಿತ್ಯ ವೇದಿಕೆ ಆ ಸಾಧನೆ ಮಾಡಿದೆ ಎಂದರು.



