ಹಾಸನ ನಗರಕ್ಕೆ ದಿನಾಂಕ 30-12-2024 ಸೋಮವಾರ ದಂದು ಸಂಜೆ ಹಾಸನ ನಗರದ ತಣ್ಣೀರು ಹಳ್ಳ ಸರ್ಕಲ್ ನಲ್ಲಿ ಸ್ವಾಗತಿಸಿ ನಂತರ ತಣ್ಣೀರು ಹಳ್ಳ ಮಠದದಲ್ಲಿ ಪೂಜೆ ಕಾರ್ಯಕ್ರಮ ನಡೆಯಿತು,

ನಂತರ ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಸಂಘದ ವತಿಯಿಂದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿದರು, ನಂತರ ಹಾಸನ ನಗರದ ಶ್ರೀ ಜವೇನಹಳ್ಳಿ ಮಠದ ಆವರಣದಲ್ಲಿ ಮಠದ ಮಠಾದೀಶರಾದ ಶ್ರೀ ಶ್ರೀ ಸಂಗಮೇಶ್ವರ ಸ್ವಾಮಿಗಳು ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಾಸನ ನಗರದ ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನೆತೃತ್ವದಲ್ಲಿ ವಿಶೇಷವಾಗಿ ನಡೆಯುವ ಜಾತ್ರಾ ಮಹೋತ್ಸವ ದಿನಾಂಕ 26-1-2025 ರಿಂದ 31-1-2025 ರ ವರೆಗೆ ಸಾಮೂಹಿಕ ವಿವಾಹ, ಭಜನಾಮೇಳ, ವಸ್ತು ಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು , ದೋಣಿ ವಿಹಾರ, ಚಿತ್ರಕಲೆ, ರಂಗೋಲಿ ಸ್ಪರೆ , ಗಾಳಿಪಟ, ಸೋಬಾನೆ ಪದ, ಛಾಯಾಚಿತ್ರ ಸ್ಪರ್ಧೆ, ಮೊದಲಾದವುಗಳು ಜರುಗುತ್ತದೆ ಹಾಗೂ ವರ್ಣ ರಂಜಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಲಿವೆ,

ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ಸಂಚಾರಿ ರಥ ಯಾತ್ರೆ ಹಾಸನ ನಗರದಲ್ಲಿ ಮೆರವಣಿಗೆ ನಡೆದಿದೆ ತಾವೆಲ್ಲರೂ ಸುತ್ತೂರು ಮಠದ ಜಾತ್ರೇಗೆ ಭಾಗವಹಿಸಿ ಎಂದು ತಿಳಿಸಿದರು.

ಹಾಸನ ನಗರಕ್ಕೆ ತಣ್ಣೀರು ಹಳ್ಳ ಸರ್ಕಲ್ ನಲ್ಲಿ ಹಾಸನ ನಗರದ ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳು ರಥಕ್ಕೆ ಹಾರ ಹಾಕಿ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಹೆಚ್.ಪಿ ಹೇಮೇಶ್ , ಶೋಭನ್ ಬಾಬು, ಹೇಮಂತ್ ಕುಮಾರ್, ಮದನ್ , ಶೆಟ್ಟಿಹಳ್ಳಿ ಧರ್ಮ. ಅವಿನಾಶ್‌ ಜಿ.ಎಸ್, ಪಾಪು , ಮಯೂರಿ ಲೋಕೇಶ್, ಲೀಲಾ ಧರ್ಮಪ್ಪ ಸಾವಿತ್ರಿ, ಹೆಚ್. ಕೆ ದೀಲಿಪ್, ಪ್ರದೀಪ್ ಮೊದಲಾದವರು ಇದ್ದರು.

ನಂತರ ತಣ್ಣಿರು ಹಳ್ಳ ಮಠದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಣ್ಣೀರು ಹಳ್ಳ ಮಠದ ಅಭಿವೃದ್ದಿ ಸಮಿತಿ ಕಾರ್ಯದರ್ಶಿ ಸೋಮಣ್ಣ, ಮಠದ ವ್ಯವಸ್ಥಾಪಕರಾದ ಶಂಕರಣ್ಣ, ಐಟಿಐ ಕಾಲೇಜು ಪ್ರಾಂಶುಪಾಲರಾದ ತುಂಗಾರಾಜು, ಉಪನ್ಯಾಸಕರಾದ ಪ್ರಸನ್ನಕುಮಾರ್. ಜಗದೀಶ್ , ರೇಣುಕಾ, ಗೀರೀರಾಜು, ಶಿಕ್ಷಕರಾದ ಮಲ್ಲಿಕಾರ್ಜುನ ನೀಲಕಂಠ, ತೋಟೇಶ್, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು,

ನಂತರ ಹೇಮಾವತಿ ಪ್ರತಿಮೆ ಬಳಿ ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯ ನಿರ್ದೇಶಕ ರಾದ ವಸಂತಕಮಾರ್, ಜಿಲ್ಲಾ ಅಧ್ಯಕ್ಷ ರಾದ ಪ್ರಸನ್ನ ಹಾಗೂ ಸಮಿತಿ ಯವರು ಪೂಜೆ ಸಲ್ಲಿಸಿ ಸ್ವಾಗತ ಮಾಡಿದರು,

ನಂತರ ಹಾಸನ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಪ್ರದಾನ ಕಾರ್ಯದರ್ಶಿ ಈ. ಎಂ. ರುದ್ರ ಕುಮಾರ್, ಸಹಕಾರ್ಯದರ್ಶಿ ಮಲ್ಲಿಕ್, ಜಂಟಿ ಕಾರ್ಯಾದರ್ಶಿ ಲತೇಶ್ ನಿರ್ದೇಶಕರಾದ ಬಾಳ್ಳು ನಾಗೇಶ್, ಬಾಳ್ಳು ಮಂಜಣ್ಣ, ಕಿರಣ್ ಹೊಸಮನಿ, ಸಂಪತ್, ಮ್ಯಾನೇಜರ್ ಷಡಕ್ಷರಿ ಹಾಸನ ಬಸವ ಕೇಂದ್ರದ ಅಧ್ಯಕ್ಷ ರಾದ ಯು. ಎಸ್. ಬಸವರಾಜು. ಕಾರ್ಯದರ್ಶಿ ಸೋಮಶೇಖರ್. ಮುಖಂಡರುಗಳಾದ ಕೀರ್ತಿ ಕುಮಾರ್, ಪಾಲಾಕ್ಷ, ಕ.ರಾ.ರ.ಸಾ.ಸಂಸ್ಥೆಯ ನೌಕರ ಸಂಘದ ಅಧ್ಯಕ್ಷರಾದ ಪಾಲಾಕ್ಷ, ನಟರಾಜ್, ಕಟ್ಟಾಯ ಶಿವಕುಮಾರ್ ನಂತರ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದರು, ಬೆಲ್ಲದ ನಟರಾಜ್, ಸಮಾಜ ಸೇವಕರಾದ ಮಹಂತೇಶ್ ಮತ್ತಿತರರ ಭಕ್ತರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *