ಸಕಲೇಶಪುರ : ಶನಿವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ 7 ಬೀನ್ ಟೀಮ್ ಕಾಫಿ, ಕಾಳುಮೆಣಸು,ಅಡಿಕೆ,ಮತ್ತು ಏಲಕ್ಕಿ “ಕಾಫಿ ಸಂಸ್ಕೃತಿ” 2025 ಕಾರ್ಯಕ್ರಮದ ಸಂಸ್ಥೆಯ ಮೊದಲ ಬ್ಯಾಚ್ ‌ನ ಸಮಾರೋಪ ತರಗತಿಯಲ್ಲಿ ಮಾತನಾಡಿದ ಅವರು ಭಾರತದ ಕಾಫಿ ಇಂದು ಪ್ರಪಂಚದಲ್ಲಿ ಅತ್ಯಂತ ಉತ್ತಮವಾದ ಕಾಫಿ ಎಂದು ಖ್ಯಾತಿಯನ್ನು ಪಡೆದಿದೆ .

ಕಾಫಿ ಬೆಳೆಗಾರರು ಇಂದು ಅಸ್ಥಿರ ಕಾಫಿ ಬೆಲೆ ,ಹವಾಮಾನ ಬದಲಾವಣೆ,ಸರಿಯಾದ ನಿರ್ವಹಣೆ ಮತ್ತು ತಾಂತ್ರಿಕ ಜ್ಞಾನದ ಕೊರತೆ ,ಕಾರ್ಮಿಕರ ಕೊರತೆ,ಹೆಚ್ಚುತ್ತಿರುವ ಸಾಗುವಳಿ ವೆಚ್ಚ,ಮಾನವ – ಪ್ರಾಣಿ ಸಂಘರ್ಷಗಳು ಮತ್ತು ಸರ್ಕಾರದ ನೀತಿಗಳ ಸಂಕೀರ್ಣತೆ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 7 ಬೀನ್ ಟೀಮ್ ಚೇರ್ಮನ್ ಹೆಚ್.ಎಸ್.ಧರ್ಮರಾಜ್, 7 ಬೀನ್ ಟೀಮ್ ಅದ್ಯಕ್ಷರಾದ ಡಾ.ಎನ್.ಕೆ.ಪ್ರದೀಪ್, ಉಪಾದ್ಯಕ್ಷರಾದ ಯು.ಎಂ.ತೀರ್ಥಮಲ್ಲೇಶ್,ಕಾರ್ಯದರ್ಶಿ ಮುರುಳೀಧರ ಎಸ್ ಬಕ್ಕರವಳ್ಳಿ, ಖಜಾಂಚಿ ಸಿ ಎಸ್.ಮಹೇಶ್, ಎನ್.ಬಿ.ಉದಯಕುಮಾರ್, ಹೆಚ್.ಹೆಚ್.ಉದಯ,ಸುಬ್ರಹ್ಮಣ್ಯ, ಕೆ.ಎನ್.ಇತರರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *