ಹೆತ್ತೂರು; ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ವಿಭಾಗದಲ್ಲಿ ರಸ್ತೆ ಸುರಕ್ಷತೆಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆಂಗ್ಲ ಭಾಷಾ ಉಪನ್ಯಾಸಕರಾದ ರೂಪ ಹೆಚ್.ಜೆ. ರಸ್ತೆ ಸುರಕ್ಷತೆಯ ಕುರಿತು ವಿವರಿಸುತ್ತ, ಸುರಕ್ಷತೆಯ ಚಾಲನೆಯ ನಿಯಮಗಳು, ಸರ್ಕಾರದ ದಂಡದ ಮಾಹಿತಿ, ಶಿಕ್ಷೆಗಳ ಬಗ್ಗೆ ವಿವರಿಸಿದರು.
ಅಪ್ರಾಪ್ತ ವಯಸ್ಕರು ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ಇರುವ ಶಿಕ್ಷೆಗಳ ಕುರಿತು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು.
ಪ್ರಾಂಶುಪಾಲರಾದ ಮಂಜುನಾಥ ಬಿ.ಡಿ., ಉಪನ್ಯಾಸಕರು ಉಪಸ್ಥಿತರಿದ್ದರು. ಕು. ಅಂಕಿತಾ ಕಾರ್ಯಕ್ರಮ ನಿರ್ವಹಣೆ ಮಾಡಿದರೆ, ಕು. ರಮ್ಯಾ ಸ್ವಾಗತಿಸಿ, ಕು. ಸೃಷ್ಟಿ ವಂದಿಸಿದರು.