ಸಕಲೇಶಪುರ : ತಾಲ್ಲೂಕು ಬಾಳ್ಳುಪೇಟೆಯಲ್ಲಿ ಕಳೆದ ಒಂದು ವರ್ಷದಿಂದ ಇಲ್ಲಿನ ಬಿಲ್ ಕಲೆಕ್ಟರ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ ವಸೂಲಿ ಮಾಡಿ ಗ್ರಾಮ ಪಂಚಾಯತಿ ಖಾತೆಗೆ ಜಮಾ ಮಾಡದೇ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ದುರಪಯೋಗ ಮಾಡಿಕೊಂಡಿದ್ದು ಈ ವಿಷಯ ಪಂಚಾಯತಿ ಅದ್ಯಕ್ಷರಿಗೆ ,ಪಿಡಿಓ,ಹಾಗೂ ಕಾರ್ಯದರ್ಶಿ ಗಮನಕ್ಕೆ ಬಂದರೂ ಸಹಿತ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದ್ದು ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳದ ಅದ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಹಾಸನ ಜಿಲ್ಲಾ ಪಂಚಾಯತಿ ಉಪ ಕಾರ್ಯನಿರ್ವಾಣಟಧಿಕಾರಿ ವಿಜಯ್ ಕುಮಾರ್ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಗಂಗಾಧರ್ ಅವರು ಮಾತನಾಡಿ ಬಾಳ್ಳುಪೇಟೆ ಪಂಚಾಯಿತಿಯಲ್ಲಿ ಕರವಸೂಲಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಮ್ಮ ಗಮನಕ್ಕೆ ಬಂದಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುದು ಎಂದರು. ಪ್ರತಿಭಟನೆಯಲ್ಲಿ ಶಿವಕುಮಾರ್ ,ಪ್ರದೀಪ್, ಕಿಶೋರ್, ಪಾಲಾಕ್ಷ,ಉದೀಶ್, ದಿನೇಶ್, ಬೋಗರಾಜು ಬನವಾಸೆ ವಿಕ್ಕಿ, ಇತರರು ಇದ್ದರು.