ಬೇಲೂರು:ತಾಲ್ಲೂಕಿನ ಚಂದನಹಳ್ಳಿಯಲ್ಲಿ ಶನಿವಾರ ರಾತ್ರಿ ಕಾಡಾನೆಗಳು ತೆಂಗು, ಜೋಳದ ಬೆಳೆಗಳನ್ನು ನಾಶಪಡಿಸಿವೆ.20 ಕಾಡಾನೆಗಳ ಹಿಂಡು ಕಳೆದ ಮೂರು ದಿನಗಳಿಂದ ‌ಚಂದನಹಳ್ಳಿಯಲ್ಲಿ ರಾತ್ರಿ ಬಂದು ಬೆಳೆಗಳನ್ನು ತಿಂದು, ನಾಶಪಡಿಸಿ ಬೆಳಿಗಿನ ಜಾವ ಅಲ್ಲಿಂದ ತೆರಳುತ್ತಿವೆ ಇದರಿಂದ ಸಾಕಷ್ಟು ಬೆಳೆನಾಶವಾಗಿದ್ದು, ಶನಿವಾರ ರಾತ್ರಿ ಯೋಗೇಶ ಅವರ ಫಸಲಿಗೆ ಬಂದ 25 ತೆಂಗಿನ ಗಿಡ, ಒಂದು ವರೆ ಎಕರೆ ಜೊಳದ ಬೆಳೆಯನ್ನು ನಾಶಪಡಿಸಿವೆ.

ಡಿ.ಎಸ್.ಗೌಡ ಅವರ ನಾಲ್ಕು ಎಕರೆ ಪ್ರದೇಶಲ್ಲಿ ಬೆಳೆದಿದ್ದ ಜೊಳದ ಬೆಳೆಗಳನ್ನು ನಾಶಪಡಿಸಿವೆ.ಪತ್ರಿಕೆಯೊಂದಿಗೆ ರೈತ ಯೋಗೇಶ್ ಮಾತನಾಡಿ, ಕಾಡಾನೆಳಿಂದ ನಾಶವಾದ ಬೆಳೆ ಸರ್ಕಾರ ನಮ್ಮಗೆ ಪರಿಹಾರ ಕೊಡುವುದು ಬೇಡ, ಆನೆಗಳನ್ನು ಸ್ಥಳಾಂತರ ಮಾಡಲಿ ಆಗ ನಾವೇ ಸರ್ಕಾರಕ್ಕೆ ಪರಿಹಾರ ನೀಡುತ್ತೇವೆ. ತೆಂಗಿನ ಗಿಡಗಳನ್ನು ಬೆಳೆಸುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೆ ಗೊತ್ತಿದೆ. ಆನೆಗಳು ಈ ರೀತಿ ಬೆಳೆ ಹಾನಿ‌ ಮಾಡುತ್ತಿದ್ದಾರೆ ನಾವು ಎನ್ನನ್ನು ತಿನ್ನಬೇಕು. ಅರಣ್ಯ ಇಲಾಖೆಯವರು ಬಂದು ಅರ್ಧಗಂಟೆ ಇದ್ದು ಹೋಗುತ್ತಾರೆ, ನಾವು ಆನೆಗಳನ್ನು ಹೇಗೆ ಓಡಿಸೋದು ನಮ್ಮಗೆ ಜೀವ ಭಯವಿಲ್ಲವೆ? ನಮ್ಮ ಬಳಿ ಏನಾರು ಆಯುದ್ಧಗಳು ಇವೆಯಾ? ಸರ್ಕಾರ ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಬಗ್ಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತರಾದ ಡಿ.ಎಸ್.ಗೌಡ, ಕಾಂತರಾಜು, ಸೋಮಶೇಖರ್ ನೀಲಕಂಠೇಗೌಡ, ಜಗದೀಶ್, ಮುದ್ದೋಜಿರಾವ್ ಇತರರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed