ಸಕಲೇಶಪುರ : ಪಟ್ಟಣದ ಅಜಾದ್ ರಸ್ತೆ ಬಡಾವಣೆಯಲ್ಲಿರುವ ನೂರುಲ್ ಇರ್ಷಾದ್ ಅರಬ್ಬಿ ಮದರಸದಲ್ಲಿ ನಡೆದ ಮಹಾಸಭೆಯಲ್ಲಿ ಶಾಫಿ ಜಮಾತಿಗೆ ಒಳಪಟ್ಟ ಸುಮಾರು 25ಕ್ಕೂ ಹೆಚ್ಚು ಮಸೀದಿಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಾದ್ಗಾರ್ ಜಾಕೀರ್ ಕಾರ್ಯದರ್ಶಿಯಾಗಿ ಆನೆಮಹಲ್ ಹಸೈನಾರ್ ಆಯ್ಕೆಯಾದರು.
ನಿರ್ಗಮಿತ ಅಧ್ಯಕ್ಷ ಹಾಜಿ ಆದಂ ರವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಯಾದ್ಗಾರ್ ಜಾಕೀರ್ ನನ್ನ ಅಧಿಕಾರ ಅವಧಿಯಲ್ಲಿ ಹಾಸನ ಜಿಲ್ಲಾ 25 ಶಾಫಿ ಮಸೀದಿಗಳು ಒಳಪಡುತ್ತದೆ. ಎಲ್ಲಾ ಮಸೀದಿಗಳ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಧರ್ಮ ಗುರುಗಳ ಸಹಕಾರದೊಂದಿಗೆ ಮದರಸಾ ಮಸೀದಿಗಳ ಸಬಲೀಕರಣಕ್ಕಾಗಿ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯಗಳಿಗೆ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತೇನೆ ಎಂದು ಹೇಳಿದರು.
ಮಸೀದಿ ಮದರಸಗಳ ಆಧುನಿಕರನಿಗೆ ಗಮನಹರಿಸುತ್ತೇನೆ ಎಂದು ಹೇಳಿದರು.
25-28 ಸಾಲಿಗೆ ಉಪಾಧ್ಯಕ್ಷಗಳಾಗಿಉಞ್ಞಕ ಕುಡುಗರಹಳ್ಳಿ, ಕುಂಞ್ಞ ಮೋನು ಮಾರ್ನಹಳ್ಳಿ, ಎ ಕೆ ಹಸೈನಾರ್ ಸಕಲೇಶಪುರ, ಸಿದ್ದೀಕ್ ಲಫಿ ಈಶ್ವರಹಳ್ಳಿ ಕೊಡಿಗೆ ಕಾರ್ಯದರ್ಶಿಗಳಾಗಿ ರಫೀಕ್ ಮದನಿ ಹರ್ಲೆ ಕೂಡಿಗೆ, ಕಲಂದರ್ ದೇಖ, ಮುಸ್ತಫ ಆಚಂಗಿ, ಆರೀಫ್ ಸಖಾಫಿ ಕಾಡ್ಲರ್ ಕೊಡಿಗೆ ಸೇರಿದಂತೆ 27 ಜನರನ್ನು ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಲಾಯಿತು