ಹಾಸನ : 1958 ರಿಂದ 1961 ರವರಿಗೆ ಜಿಲ್ಲಾಧಿಕಾರಿಗಳಾಗಿದ್ದ ಚಂದಪ್ಪ ಪಾಟೀಲ್ ರವರ ಕುಟುಂಬಸ್ಥರು ದಿನಾಂಕ 6-1-2024 ರಂದು ಹಾಸನ ಮಲೆನಾಡು ಇಂಜಿನೀಯರಿಂಗ್ ಕಾಲೇಜಿಗೆ ಬೇಟಿ ನೀಡಿದ ಅವರಿಗೆ ಹಾಸನ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ವತಿಯಿಂದ ಹಾಗು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕಾರಿಗಳಾಗಿದ್ದ ಚಂದಪ್ಪ ಪಾಟೀಲ್ ರವರಿಗೆ 6ಜನ ಹೆಣ್ಣು ಮಕ್ಕಳು 4 ಜನ ಗಂಡು ಮಕ್ಕಳು ಇದ್ದಾರೆ. ಚಂದಪ್ಪ ಪಾಟೀಲ್ ರವರು ಮೂಲತಃ ಗುಲ್ಬರ್ಗಾ ಜಿಲ್ಲೆಯವರು ಅವರು ಹಾಸನ ಜಿಲ್ಲಾಧಿಕಾರಿ ಗಳಾಗಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ. ಕೊಡಗು ಜಿಲ್ಲೆ ಒಳಗೊಂಡಂತೆ ರೈತರು. ಉದ್ಯಮಿಗಳು. ಕಾಫೀ ಪ್ಲಾಂಟರ್ಸ್. ಸಾರ್ವಜನಿಕರು ಒಳಗೊಂಡಂತೆ ಎಲ್ಲರ ಚಂದಾ ಹಣ ಎತ್ತಿ ಹಾಗೂ ಕೇಂದ್ರ ಸರ್ಕಾರದ ಅನುದಾನ ಮ್ಯೆಸೂರು ಪ್ರಾಂತದ ಅನುದಾನ ಪಡೆದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಎಂದು ಇಂದು ಮಲೆನಾಡು ಇಂಜಿನೀಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಚಂದಪ್ಪ ಪಾಟೀಲ್ ರವರ ಕುಟುಂಬಸ್ಥರನ್ನು ಸನ್ಮಾನಿಸಿ ಮಾತನಾಡಿದ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ರಾದ ಡಾ ಎ ಜೆ ಕೃಷ್ಣಯ್ಯ ರವರು ತಿಳಿಸಿದರು ಅಂದು ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ್ನು ಸ್ಥಾಪಿಸಲು ಹೀರಿಯರಾದ ಜಿ ಎಲ್ ನಲ್ಲೂರೆಗೌಡರು .ಬಿ ಎನ್ ಬೋರಣ್ಣ ಗೌಡ್ರು. ಎಲ್ ಟಿ ಕಾರ್ಲೆರವರು ಹಾರನಹಳ್ಳಿರಾಮಸ್ವಾಮಿ, ರವರು ಬಾಳ್ಳು ಗುರಪ್ಪ. ರವರು ಎಸಳೂರು ಧರ್ಮಪ್ಪ ,ರವರು ,ಬಿ ಬಿ ಶಿವಪ್ಪನವರು ಅನೇಕ ಮಹನಿಯರು ಮತ್ತು ದಾನಿಗಳ ನೆರವಿನಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಿಂದ ಅಂದಿನ ಜಿಲ್ಲಾಧಿಕಾರಿಗಳಾದ ಮಾನ್ಯ ಚಂದಪ್ಪ ಪಾಟೀಲ್ ರವರ ಶ್ರಮದಿಂದ ಸ್ಥಾಪೀಸಲ್ ಪಟ್ಟಿದೆ ಎಂದು ತಿಳಿಸಿದರು ಇಂದು ಅವರ ಕುಟುಂಬದ ಸದಸ್ಯರು ಕಾಲೇಜಿಗೆ ಅಗಮಿಸಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.ಚಂದಪ್ಪ ಪಾಟೀಲ್ ರವರ ಮಗಳಾದ ಪೂರ್ಣಿಮಾ ಜಯರಾಜ್ ಮಾತಾನಾಡಿ ಸುಮಾರು ಐವತ್ತು ಎಕರೆ ಪ್ರದೇಶದಲ್ಲಿ ಮಲೆನಾಡು ಕಾಲೇಜನ್ನು ಸ್ಥಾಪಿಸಲು ನಮ್ಮ ತಂದೆಯವರು ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಸಂತೋಷವಾಯಿತು.ಇಂದು ಮಲೆನಾಡು ಇಂಜಿನೀಯರಿಂಗ್ ಕಾಲೇಜ್ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದೆ ಇದಕ್ಕೆಲ್ಲ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ಇನ್ನೂ ಹಲವಾರು ಹೊಸ ವಿಷಯಗಳನ್ನು ತಂದು ಯಶಸ್ವಿಯಾಗಿ ಕಾಲೇಜಿನ ಕೀರ್ತಿ ಬೆಳಗಲಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕರಾದ ಡಾ ಪ್ರದೀಪ್. ಮಾತಾನಾಡಿ ಅಂದು ಮಲೆನಾಡು ಇಂಜಿನೀಯರಿಂಗ್ ಕಾಲೇಜು ಹಾಸನ ದಲ್ಲಿ ಪ್ರಾರಂಭ ಕೊಂಡಿದ್ದರಿಂದ. ಹಾಸನ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಸಾವೀರಾರು ಜನ ಇಂಜಿನೀಯರಿಂಗ್ ಪಧವಿ ಪಡೇಯಲು ಸಹಾಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಕಾಲೇಜಿನ ಡೀನ್ ಗೀತಾ ಕೀರಣ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ರವರು ವಿಭಾಗದ ಮುಖ್ಯಸ್ಥರು ಪ್ರಾಧ್ಯಾಪಕರು ಉಪನ್ನಾಸಕರು ನೌಕರರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed