
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದೇವಿರಮ್ಮನವರ ದೇವಸ್ಥಾನದಲ್ಲಿ ಕಳ್ಳರು ಬೀಗ ಹೊಡೆದು ದೇವರ ಮುಖವಾಡ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ
ದೇವಿರಮ್ಮನವರ ದೇವಸ್ಥಾನದ ಮುಂಭಾಗ ಇರುವ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲೂ ಈ ಹಿಂದೆ ಎರಡು ಮೂರು ಬಾರಿ ದೇವಸ್ಥಾನದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೇವಸ್ಥಾನ ಇದ್ದರು ಈ ರೀತಿಯ ಕಳ್ಳತನ ಪ್ರಕರಣ ನಡೆದಿದೆ
ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡಿರುವ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ
