ಹಾಸನ : ವೀರಶೈವ ಲಿಂಗಾಯತ ಯುವ ಸೇನೆ ಹಾಸನ ಘಟಕದಿಂದ ಡಾ! ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ 6ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮವು ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ರಕ್ತದಾನ ಶಿಬಿರ ಹಾಗೂ ದಾಸೋಹ ಕಾರ್ಯಕ್ರಮವು ನಡೆಯಿತು

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಶ್ರೀ ಸಂಗಮೇಶ್ವರ ಸ್ವಾಮಿಗಳು ಹಾಗೂ ಚಿಲುಮೆ ಮಠದ ಮಠಾಧೀಶರಾದ ಶ್ರೀ ಶ್ರೀ ಜಯದೇವ ಸ್ವಾಮಿಗಳು ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ರವರು ಆಗಮಿಸಿದ್ದರು.

ನಗರ ಸಭಾ ಅಧ್ಯಕ್ಷರಾದ ಚಂದ್ರೇಗೌಡರು, ಶಿವಗಂಗಾ ಗ್ರಾನೈಟ್ ಮಾಲೀಕರಾದ ರಾಜಶೇಖರ್ ರವರು, ವೀರಶೈವ ಲಿಂಗಾಯತ ಮಹಾಸಭ ಅಧ್ಯಕ್ಷರಾದ ನವಿಲೆ ಪರಮೇಶ್ ರವರು, ಅರಸೀಕೆರೆ ಜೆಡಿಎಸ್ ಮುಖಂಡರಾದ ಎನ್. ಆರ್ ಸಂತೋಷ್ ರವರು, ಪುನೀತ್ ಕೆರೆಹಳ್ಳಿರವರು, ಮತ್ತು ಸಮಾಜದ ಮುಖಂಡರುಗಳಾದ ಈ. ಎಂ ರುದ್ರಕುಮಾರ್ ರವರು, ಮಹಾಸಭಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರವರು, ಬೇಲೂರು ವೀ.ಲಿಂ.ಮ.ಸಭಾ ತಾಲೂಕು ಅದ್ಯಕ್ಷದಾರ ಅಡಗೂರು ಬಸವರಾಜಣ್ಣರವರು ಹಾಗೂ ವೀರಶೈವ ಲಿಂಗಾಯತ ಯುವ ಸೇನೆಯ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *