ಯಾವುದೇ ರೈತ ಬ್ಯಾಂಕ್ಗಳಿಗೆ ಮೋಸ ಮಾಡಿದ್ದಗಲಿ, ದೇಶ ಬಿಟ್ಟು ಹೋಗಿದ್ದಾಗಲಿ ಇತಿಹಾಸದಲ್ಲೇ ಇಲ್ಲಾ!! ಹೆಚ್ ಬಿ ಶಿವಣ್ಣ ಕರ್ನಾಟಕ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಇಂದು ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಮ್ ಜೆ ದಿನೇಶ್ ರವರು ಮತ್ತು ಕಾಫಿ ಮಂಡಳಿಯ ಕಾರ್ಯನಿರ್ವಾಹಕಾಧಿಕಾರಿಯಾದ ಡಾಕ್ಟರ್ ಜಗದೀಶ್ ರವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಬ್ಯಾಂಕ್ ಅಧಿಕಾರಿಗಳು, ಹಾಗೂ ಕಾಫಿ ಬೆಳೆಗಾರ ಪದಾಧಿಕಾರಿಗಳ ಸಭೆ ನೆಡೆಯಿತು.
ಸಭೆಯಲ್ಲಿ ರೈತರಿಗೆ ಬ್ಯಾಂಕ್ ಗಳಿಂದ ಆಗುತ್ತಿರುವ ತೊಂದರೇ ಗಳ ಬಗ್ಗೆ ಬೆಳೆಗಾರ ಸಂಘದ ಪದಾಧಿಕಾರಿಗಳು ಬ್ಯಾಂಕ್ ನ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರು. ಹಾಗೆಯೇ ಬ್ಯಾಂಕ್ ಅಧಿಕಾರಿಗಳು ಕಾಫಿ ಬೆಳೆಗರಾರಿಗಾಗಿ ತಂದಿರುವ ಹೊಸ ಹೊಸ ಯೋಜನೆಗಳನ್ನು ತಿಳಿಸಿದರು.
ಮುಖ್ಯವಾಗಿ ಬ್ಯಾಂಕ್ ಅಧಿಕಾರಿಗಳು 3 ತಿಂಗಳಿಗೊಮ್ಮೆ ರೈತರ ಸಭೆ ಕರೆಯಬೇಕು, ಹಾಗೆಯೇ ರೈತರು ಸಾಲ ಪಡೆಯುವಾಗ ಆದಷ್ಟು ರೈತರಿಗೆ ಮಾಹಿತಿ ನೀಡಿ ಸಹಿ ಹಾಕಿಸಿಕೊಳ್ಳಬೇಕು, ಕನ್ನಡ ಭಾಷೆಯಲ್ಲಿನ ಸಾಲದ ಅರ್ಜಿ ನೀಡಬೇಕು, ಸರ್ಫೆಸಿ ಹೆಸರಲ್ಲಿ ಆನ್ಲೈನ್ ಲಿ ಬ್ಯಾಂಕ್ ನವರು ಜಮೀನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು, ಹಾಗೆ ಅನವಶ್ಯಕವಾಗಿ ಪ್ರೊಸೆಸ್ ಚಾರ್ಜ್ ವಿಸಿಟಿಂಗ್ ಚಾರ್ಜ್ನ್ನು ಪ್ರತಿ ವರ್ಷ ಪಡೆಯಬಾರದು, ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕೆನರಾ ಬ್ಯಾಂಕ್, ಲೀಡ್ ಬ್ಯಾಂಕ್, SBI , ಯೂನಿಯನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, HDFC ಬ್ಯಾಂಕ್ ಇತ್ಯಾದಿ ಬ್ಯಾಂಕ್ಗಳ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಬೆಳೆಗಾರರ ಪರವಾಗಿ ಅಧ್ಯಕ್ಷರಾದ ಪರಮೇಶ್ ಹಾಗೂ ಕಾರ್ಯದರ್ಶಿ ಲೋಹಿತ್ ಹಾಗೂ ಬೆಳೆಗಾರ ಸಂತೋಷ ಕೊಟ್ಟೂರಪ್ಪ ಭಾಗವಹಿಸಿದ್ದರು