
ಅಖಿಲ ಕರ್ನಾಟಕ ರಾಣೆಯರ್ ಸಮಾಜ ಸೇವಾ ಸಂಘ (ರಿ ) ಮಂಗಳೂರು , ದ. ಕ ಮತ್ತು ರಾಣೆಯರ್ ಸಮಾಜ ಸೇವಾ ಸಂಘ ತುಂಬೆತಡ್ಕ ಇವರ ಜಂಟಿ ಆಶ್ರಯದಲ್ಲಿ ಇಂದು ತುಂಬೆತಡ್ಕದ ಅಂಗನವಾಡಿ ವಠಾರದಲ್ಲಿ ಐದು ಜಿಲ್ಲೆಗಳ ರಾಣೆಯರ್ ಸಮಾಜದ ಸಮಾಲೋಚನಾ ಸಭೆ ಜರಗಿದ್ದು ಈ ಒಂದು ಸಭೆಯು ಹಾಸನ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಮೋನಪ್ಪ ಹೆಗ್ಗದೆ ಇವರ ಅದ್ಯಕ್ಷತೆಯಲ್ಲಿ ಜರಗಿತು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೂರಪ್ಪ ರಾಣೆಯರ್ ಸಂಸ್ಥಾಪಕಾಧ್ಯಕ್ಷರು ರಾಣೆಯಾರ್ ಸಮಾಜ ಸೇವಾ ಸಂಘ ಶಶಿಕಾಂತ್ ಬೈಲೂರ್ ಪ್ರಧಾನ ಕಾರ್ಯದರ್ಶಿಗಳು , ಶಿವಣ್ಣ ಕೋಶಾಧಿಕಾರಿ, ಕೃಷ್ಣಪ್ಪ ನೆಲ್ಯಾಡಿ, ಸಂತೋಷ್ ಕುಮಾರ್ ಬೈಲೂರು ಮಾಜಿ ಅಧ್ಯಕ್ಷರು ಹಾಗೂ ತುಂಬೆತಡ್ಕದ ವಲಯ ಸಮಿತಿಯ ನೂತನ ಅಧ್ಯಕ್ಷರಾದ ಮಹಾಬಲ ರಾಣೆಯರ್ ಹಾಗೂ ಮತ್ತು ಐದು ಜಿಲ್ಲೆಗಳ ಪ್ರಮುಖರು ಉಪಸ್ಥಿತಿಯರಿದ್ದರು
ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಸಂಘದ ಬಲವರ್ಧನೆಗೆ ಹೆಚ್ಚಿನ ಪ್ರಯತ್ನ ಅತ್ಯಗತ್ಯ ಎಂದು ಹಾಸನ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಮೋನಪ್ಪ ಹೆಗ್ಗದೆ ಮುಂದಿನ ಯುವ ಪೀಳಿಗೆಗೆ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಐದು ಜಿಲ್ಲೆಗಳ ರಾಣೆಯರ್ ಸಂಘದ ಪ್ರಮುಖರು ಹಾಗೂ ಸದಸ್ಯರುಗಳು ಭಾಗಿಯಾಗಿದ್ದರು.