ಸಕಲೇಶಪುರ : ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಶಾಸಕರ ಅನುಧಾನದಲ್ಲಿ ಕರಡಿಗಾಲದಿಂದ ಚಿನ್ನಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಕಿರು ಸೇತುವೆಗೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತ ಕರಡಿಗಾಲ ಗ್ರಾಮದಲ್ಲಿ ಹದೆಗೆಟ್ಟಿರುವ ಹೊರಟ್ಟಿ ರಸ್ತೆಯನ್ನು ಶೀಘ್ರದಲ್ಲಿ ಮಾಡಿಸುವುದಾಗಿ ಭರವಸೆ ಕೊಟ್ಟರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರಡಿಗಾಲ ಹರೀಶ್ ರವರು ಶಾಸಕರಾಗಿ ಅಲ್ಪ ಅವಧಿಯಲ್ಲಿ ನಮ್ಮ ಗ್ರಾಮಕ್ಕೆ 2 ಬಸ್ಸಿನ ವ್ಯವಸ್ಥೆ ಮಾಡಿದರು ಹಾಗೂ ಕಾಲೋನಿ ರಸ್ತೆ ಗೆ 100 ಮೀಟರ್ ಸಿಮೆಂಟ್ ರಸ್ತೆ ಜೊತೆಗೆ ಬಹು ದಿನಗಳ ಜನರ ಬೇಡಿಕೆಯಾದ ಮೋರಿಗಳ ವ್ಯವಸ್ಥೆ ಹಾಗೂ ಇನ್ನು ಹಲವಾರು ಕೆಲಸ ಮಾಡಿರುತ್ತಾರೆ ಮತ್ತು ಅವರ ಸರಳತೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು BJP ಅಧ್ಯಕ್ಷರಾದ ವಳಲಹಳ್ಳಿ ಅಶ್ವಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಗಳಾದ ಬೊಮ್ಮನಕೆರೆ ಮಧು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರೂಪ ರನ್ನಿಶ್, ಗ್ರಾಮ ಪಂಚಾಯತಿ ಸದಸ್ಯರಾದ ವಳಲಹಳ್ಳಿ ಸುದರ್ಶನ್ ಹಾಗೂ ಬೊಮ್ಮನಕೆರೆ ರೇಣುಕಾ ರವರು ಬಿಜೆಪಿ ಮುಖಂಡರಾದ ತಿಪ್ಪೇಸ್ವಾಮಿಯವರು, ಇಂಜಿನಿಯರಿಗಳಾದ ಮುರುಗೇಶ್ ಹಾಗೂ ವಸಂತ್ ರವರು ಗುತ್ತಿಗೆದಾರರಾದ ಕೃಷ್ಣರವರು ಹೆಚ್ಚಿನ ಸಂಖ್ಯೆ ಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed