
ಸಕಲೇಶಪುರ : ಸಕಲೇಶ್ವರ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಯಿಂದ ಸಾರ್ವಜನಿಕರಿಗೆ ಮುಕ್ತ ಮಾಡಬೇಕು ಎಂದು ಆಗ್ರಹಿಸಿದ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಸದಸ್ಯರು ಸಕಲೇಶ್ವರ ಸ್ವಾಮಿ ದೇವಸ್ಥಾನ ಐತಿಹಾಸಿಕ ದೇವಸ್ಥಾನವಾಗಿದ್ದು. ಕಾರ್ಣಿಕ ದೈವವಾಗಿದ್ದು ಶತಮಾನಗಳ ಹಿಂದೆ ಪ್ರತಿಷ್ಠಾಪನೆಯಾಗಿರುವ ದೇವಸ್ಥಾನವಾಗಿದ್ದು. ವಾರ್ಷಿಕ ಮಾಘ ಹುಣ್ಣಿಮೆ ಮಾಸದಲ್ಲಿ ಅದ್ದೂರಿ ಘಳಿಗೆ ತೇರು ಮತ್ತು ದಿವ್ಯ ರಥೋತ್ಸವ ನಡಿಯುತ್ತದೆ. ದಿನನಿತ್ಯ ಪೂಜೆ ವಿಶೇಷ ಹಬ್ಬ ಹರಿದಿನಗಳಲ್ಲಿ ಪೂಜೆ ಹೋಮ ಹವನ ನಡಿಯುತ್ತದೆ ಇದ್ದಕ್ಕೂ ಯಾವದೇ ಹಣ ಸರ್ಕಾರ ನೀಡುತ್ತಿಲ್ಲ.ಐತಿಹಾಸಿಕ ರಥೋತ್ಸವಕ್ಕೂ ಸರ್ಕಾರದಿಂದ ಮುಜರಾಯಿ ಇಲಾಖೆಯಿಂದ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು .
ಮುಜರಾಯಿ ಇಲಾಖೆ ದೇವಸ್ಥಾನದ ನಿರ್ವಹಣೆ ಮಾನ್ಯ ತಹಶೀಲ್ಧಾರ್ ಅವರದಾಗಿರುತ್ತದೆ. ದಿನಾಂಕ:17.03.2025 ರಲ್ಲಿ ನೀಡಿರುವ ಮಾಹಿತಿ ಅನ್ವಯ ಸಕಲೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವದ ಅಂಗವಾಗಿ 2022-23, 2023-24, 2024-25 ರ ಸಾಲಿನ ರಥೋತ್ಸವದ ಖರ್ಚು ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡಲು ರಾಜ್ಯ ಮುಜರಾಯಿ ಇಲಾಖೆಗೆ ಯಾವುದೇ ಪತ್ರ ವ್ಯವಹಾರ ಮಾಡಿಲ್ಲ ಎಂದು ಉಲ್ಲೇಕೀಸಿದ್ದಾರೆ.
ತಹಶೀಲ್ಧಾರ್ ಕಚೇರಿ ವತಿಯಿಂದ ಪತ್ರ ಸಂಖ್ಯೆ 96/2024-25ದಿನಾಂಕ 17.03.2025 ನೀಡಿರುವ ಹಿಂಬರಹದಲ್ಲಿ ಸಕಲೇಶಪುರ ತಾಲ್ಲೂಕು ಸಕಲೇಶ್ವರ ಸ್ವಾಮಿ ದೇವಸ್ಥಾದಲ್ಲಿ ಮಾಘ ಮಾಸದ ಹುಣ್ಣಿಮೆಯಂದು 12.02.2025, 13.02.2025 ರಂದು ನಡೆದ ಘಳಿಗೆ ತೇರು ಮತ್ತು ದಿವ್ಯ ರಥೋತ್ಸವದ ಪೂಜೆ ವಿಧಿ ವಿಧಾನಗಳಿಗೆ ಹೋಮ ಹವನ ರಥೋತ್ಸವದ ಖರ್ಚಿಗೆ ಮಾನ್ಯ ತಹಶೀಲ್ಧಾರ್ ರವರು ಮುಜರಾಯಿ ಇಲಾಖೆಗೆ ಯಾವುದೇ ಪತ್ರ ವ್ಯವಹಾರ ಮಾಡಿರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ.
ತಹಶೀಲ್ಧರ್ ಸಕಲೇಶಪುರ ಅವರ ಕಚೇರಿ ಯಿಂದ ನೀಡಿರುವ ಹಿಂಬರದಲ್ಲಿ ಸಕಲೇಶ್ವರ ಸ್ವಾಮಿ ರಥೋತ್ಸವಕ್ಕೆ ಯಾವದೇ ಹಣ ಬಿಡುಗಡೆ ಮಾಡಿಲ್ಲ ಎಂದು ಅಧಿಕೃತ ಮಾಹಿತಿ ನೀಡಿದ್ದು ಕೇವಲ ಭಕ್ತರ ಹುಂಡಿ ಹಣವನ್ನು ಲೂಟಿ ಮಾಡಿರುವ ಸಕಲೇಶಪುರ ಮುಜರಾಯಿ ಇಲಾಖೆ ರಥೋತ್ಸವದ ಸಮಯದಲ್ಲಿ ಸುಣ್ಣ ಬಣ್ಣ ಪೂಜೆ ಕೈಕಂರ್ಯಗಳಿಗೆ ಪ್ರಸಾದ ವ್ಯವಸ್ಥೆಗೆ ಹಣ ನೀಡದೆ ಭಕ್ತರಿಗೆ ವಂಚಿಸಿದ್ದು. ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿರುವ ಸಕಲೇಶಪುರ ತಹಶೀಲ್ಧಾರ್ ಕಚೇರಿ. ಸಕಲೇಶ್ವರ ಸ್ವಾಮಿ ದೇವಸ್ಥಾನ ನಿರ್ವಹಣೆ ಮಾಡುವ ಅಧಿಕಾರ ಚಲಾಯಿಸುವ ಯಾವುದೇ ನೈತಿಕತೆ ಹೊಂದಿಲ್ಲ. ಆದ್ದರಿಂದ ದಯಮಾಡಿ ಸಕಲೇಶ್ವರ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಯಿಂದ ಮುಕ್ತ ಮಾಡಬೇಕು ಮತ್ತು ಸಾರ್ವಜನಿಕರ ಸೂಪರ್ದ್ದಿಗೆ ನೀಡಿ ಸಮಿತಿ ಮಾಡಿ ಮುಂದುವರೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
‘ಸರ್ಕಾರಿ ಟೆಂಡರ್‌ಗಳಲ್ಲಿ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಅತಿಯಾದ ತುಷ್ಟೀಕರಣಕ್ಕೆ ಮುಂದಾಗಿದೆ. ಜಾತ್ಯತೀತ ಸರ್ಕಾರಗಳು ಈ ರೀತಿ ಧರ್ಮದ ಆಧಾರದ ಮೇಲೆ ಓಲೈಸುವ ಕ್ರಮಗಳನ್ನು ಕೈಗೊಳ್ಳುವ ಯಾವುದೇ ಅಧಿಕಾರ ಹೊಂದಿರುವುದಿಲ್ಲ. ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ಪಿಎಫ್ಐ ಮತ್ತು ಕೆಎಫ್‌ಡಿಯಂತಹ ಸಮಾಜಘಾತುಕ ಶಕ್ತಿಗಳ ‘ಕೈ’ಗಳನ್ನು ಇನ್ನಷ್ಟು ಭದ್ರಪಡಿಸುವ ಹುನ್ನಾರ ಇದಾಗಿದೆ ಎಂದು ಆರೋಪಿಸಿ ಮಸೂದೆ ಹಿಂದೆ ಪಡಿಯಬೇಕು ಎಂದು ರಾಜ್ಯಪಾಲರಿಗೆ ಮನವಿಚ್ಚ ಮಾಡಿದರು .
ಈ ಸಂದರ್ಭದಲ್ಲಿ ರಘು ಸಕಲೇಶಪುರ, ಶಿವೂ ಜಿಪ್ಪಿ, ಸುಪ್ರೀತ್ ಆಟೋ ಇತರರು ಉಪಸ್ಥಿತಿ ಇದ್ದರು.

