ತಾಲ್ಲೂಕು ಪಂಚಾಯತ್ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಸನ ಹಾಗೂ ಶುಭೋದಯ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಯಸಳೂರು ಇವರ ಸಹಯೋಗದಲ್ಲಿ 13 ದಿನಗಳ ತರಬೇತಿಯನ್ನು ಮುಕ್ತಾಯಗೊಳಿಸಿದ್ದಾರೆ

ಸಕಲೇಶಪುರ 16. ರಿಂದ 28. ರವರೆಗೆ ಒಟ್ಟು 13 ದಿನಗಳ ಸೆಣಬಿನ ಉತ್ಪನ್ನಗಳಿಂದ ಜೂಟ್ ಬ್ಯಾಗ್ ತಯಾರಿಕ ತರಬೇತಿಯನ್ನು ಆಯೋಜಿಸಲಾಗಿದ್ದು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಸ್ವ ಸಹಾಯ ಮತ್ತು ಸ್ತ್ರೀ ಶಕ್ತಿ ಗುಂಪಿನ 35 ಸದಸ್ಯರುಗಳಿಗೆ ತರಬೇತಿ ನೀಡಲಾಯಿತು.

ಬುಧವಾರ ದಂದು ಯಸಳೂರು ಗ್ರಾಮ ಪಂಚಾಯತಿಯಲ್ಲಿ ಜೂಟ್ ಬ್ಯಾಗ್ ತಯಾರಿಕೆ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರ ಆದಿತ್ಯ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಹರೀಶ್, ಸುಚಿತ್ ಕುಮಾರ್, ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಸನ ನಾಗೇಶ್ ತಾಲ್ಲೂಕು ಕಾರ್ಯಕ್ರಮದ ವ್ಯವಸ್ಥಾಪಕರು, ಹರಿಪ್ರಸಾದ್ ಸಂಯೋಜಕರು, ವಲಯ ಮೇಲ್ವಿಚಾರಕರಾದ ರೇಣುಕಾ ಪ್ರಸಾದ್, ರತನ್, ಕುಮಾರಿ, ಗಾನವಿ ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿ, ಪದಾಧಿಕಾರಿಗಳು, ಎಮ್ ಬಿ ಕೆ, ಎಲ್ ಸಿ ಆರ್ ಪಿ ಗಳು, ಕೃಷಿ ಸಖಿ, ಪಶು ಸಖಿಯವರು, ಸ್ವ ಸಹಾಯ ಗುಂಪಿನ ಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು,

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *