ಸಕಲೇಶಪುರ.ತಾಲೂಕಿನ ಬಾಳ್ಳುಪೇಟೆ ಸಮೀಪದ ಬಂದಿಹಳ್ಳಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳದಿಂದಾಗಿ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಂದಿತಾ(27) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಶನಿವಾರ ಬೆಳಿಗ್ಗೆ ಪೋಷಕರು ತೋಟದ ಕೆಲಸಕ್ಕೆ ತೆರಳಿದ ವೇಳೆ ಮನೆಯ ತೊಲೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆಯ ವಿವರ.

ವರದಕ್ಷಿಣೆ ಕಿರುಕುಳದಿಂದ ನನ್ನ ಮಗಳು ನಂದಿತ ಆತ್ಮಹತ್ಯೆ ಮಾಡಿಕೊಂಡಿದ್ದು ಅವಳ ಆತ್ಮಹತ್ಯೆಗೆ ಕಾರಣರಾದ ಪತಿ ಸೋಮಶೇಖರ್ ಹಾಗೂ ತಾಯಿ ಮುಟ್ಟಿ ಅವರ ಮೇಲೆ ಕೇಸು ದಾಖಲಿಸಬೇಕು ಎಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ ಘಟನೆ ಸಕಲೇಶಪುರ ತಾಲೂಕು ಬಂದಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ನನ್ನ ಮಗಳನ್ನು ಮದುವೆಯಾಗಿದ್ದ ಸೋಮಶೇಖರ್ ಹೆಚ್.ಐ, ಮತ್ತು ಈತನ ತಾಯಿ ಮುಟ್ಟ ಇವರುಗಳ ಸೇರಿಕೊಂಡು, ನನ್ನ ಮಗಳಿಗೆ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೀಡಿ, ಮಾನಸಿಕ ಹಿಂಸೆ, ನೀಡಿ, ನನ್ನ ಮಗಳನ್ನು ಮನೆ ಬಿಟ್ಟು ಓಡಿಸಿ, ನನ್ನ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ಸೋಮಶೇಖರ್ ಅವನ ತಾಯಿ ಮುಟ್ಟಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ತಂದೆ ವಿಶ್ವನಾಥ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು. ಮೂರು ತಿಂಗಳ ಹಿಂದೆ ನನ್ನ ಮಗಳಾದ ನಂದಿತ (27 ವರ್ಷ ) ಇವಳನ್ನು ಇದೇ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಕೂಡನಹಳ್ಳಿ ಗ್ರಾಮದ ವಾಸಿಯಾದ ಸೋಮಶೇಖರ್ ಎಂಬುವರೊಂದಿಗೆ ವಿವಾಹ ಮಾಡಿಕೊಟ್ಟರುತ್ತೇನೆ.ಸೋಮಶೇಖರ್ ಹೆಚ್.ಐ. ಈತನು ನನ್ನ ಮಗಳನ್ನು ವಿವಾಹವಾಗಿ ಒಂದು ವಾರದವರೆಗೆ ಮಾತ್ರ ಅನ್ನೋನ್ಯವಾಗಿ ದಾಂಪತ್ಯ ಜೀವನ ನಡೆಸಿದ್ದು, ನಂತರದ ಅವಧಿಯಲ್ಲಿ ಸದರಿ ಸೋಮಶೇಖರ್ ಹೆಚ್.ಟಿ ಮತ್ತು ಈತನ ತಾಯಿಯಾದ ಮುಟ್ಟಿ ಇವರುಗಳು ಸೇರಿಕೊಂಡು, ನನ್ನ ಮಗಳಿಗೆ ನೀನು ನಾವು ಹೇಳಿದಂತೆ ಕೇಳಕೊಂಡು ಬಿದ್ದಿರಬೇಕು, ನೀನು ಮಾಡುವ ಅಡುಗೆ ಚೆನ್ನಾಗಿಲ್ಲ, ನಮ್ಮ ಮನೆಯ ಕೆಲಸದವಳಂತೆ ಇರಬೇಕು ಎಂದು ಹಿಂಸ ನೀಡುತ್ತಾ, ಮುಟ್ಟಿಯು ನನ್ನ ಮಗಳು ಮಾಡಿದ ಅಡುಗೆಯನ್ನು ತಿನ್ನದ ನಾಯಿಗೆ ಹಾಕುತ್ತಾ ಬಂದಿರುತ್ತಾರೆ. ಅಲ್ಲದೆ, ಸೋಮಶೇಖರ್ ಹೆಚ್‌.ಐ, ಈತನು ನನಗೆ ವರದಕ್ಷಿಣೆ ನೀಡುವ ಅದೆಷ್ಟೋ ಸಂಬಂಧಗಳು ಬಂದಿದ್ದವು. ನಾನು ನಿನ್ನನ್ನು ಮದುವೆಯಾಗಿ ತಪ್ಪು ಮಾಡಿದೆ. ನೀನು ನನ್ನ ಜೊತೆ ಇದ್ದರೆ, ಹೆಚ್ಚಿನ ವರದಕ್ಷಿಣೆ ನೀಡುವ ಹುಡುಗಿಯನ್ನು ಮದುವೆಯಾಗಲು ಸಾಧ್ಯವಿಲ್ಲ, ನೀನಾಗಿಯೇ ಮನೆ ಬಿಟ್ಟು ಹೋಗು ಎಂದು ಅದರಿಕೆ ಹಾಕುತ್ತಾ ಬಂದಿದ್ದಲ್ಲದೆ, ಮುಟ್ಟಿಯವರು, ಸಮಶೇಖರ್ ಹೆಚ್‌.ಬೀನಿಗೆ ಹಾಕಿ ಮಾತನ್ನು ಹೇಳಿಕೊಟ್ಟು, ಕೈನಿಂದ ಮರಗಳಿಂದ ಈ ನಡೆಸಿಕೊಂಡು ಬಂದಿರುತ್ತಾನೆ. ಅಲ್ಲದೆ, ನನ್ನ ಮಗಳಾದ ನಂದಿತಾಳು ಹಾಸನದ ಹೆಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಕೂಡನಹಳ್ಳಿಯಿಂದ ಹಾಸನಕ್ಕೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದರೂ ಸಹ, ಸೋಮಶೇಖರ್ ನನ್ನ ಮಗಳು ಕೆಲಸ ಮಾಡುತ್ತಿದ್ದ ಹಾಸನದ ಬ್ಯಾಂಕಿನ ಬಳಗೆ ಆತನ ಸ್ನೇಹಿತರನ್ನು ಕರೆದುಕೊಂಡು ಹೋಗಿ, ಗಲಾಟೆ ಮಾಡಿ, ಕೆಲಸ ಮಾಡಲು ಆಡುತ್ತಿರಲಿಲ್ಲ.ನನ್ನ ಮಗಳಾದ ನಂದಿತಾಳು ಸೋಮಶೇಖರ್ ಮತ್ತು ಈತನ ತಾಯಿ ಮುಖ್ಯ ಇವರುಗಳು ನೀಡುತ್ತಿದ್ದ ಹಿಂಸೆ, ಕಿರುಕುಳದ ಬಗ್ಗೆ ನನಗೆ ವಿಷಯ ತಿಳಿಸುತ್ತಿದ್ದಳು, ನಾನು ನನ್ನ ಮಗಳಗೆಗೆ ಹೊಂದಾಣಿಕೆಯಿಂದ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿವಾದಗಳನ್ನು ಹೇಳುತ್ತಾ ಬಂದಿರುತ್ತೇನೆ. ಆದರೂ ಸಹ ಸುಮ್ಮನಾಗದ ಸೋಮಶೇಖರ್ ಮತ್ತು ಈತನ ತಾಯಿ ಮುಟ್ಟಿಯು ಒಂದು ವಾರದ ಹಿಂದೆ ನನ್ನ ಮಗಳಾದ ನಂದಿತಳಿಗೆ ಹೊಡೆದು ಒತ್ತಾಯಪೂರ್ವಕವಾಗಿ ಮನೆಯಿಂದ ಹೊರಹಾಕಿ ನಿನ್ನ ತವರು ಮನೆಯಿಂದ ಹಣವನ್ನುತಂದರೆ ಮಾತ್ರ ಮನೆಗೆ ಸೇರಿಸುತ್ತೇವೆ ಇಲ್ಲದಿದ್ದಲ್ಲ ನಿನ್ನ ಕೈಕಾಲುಗಳನ್ನು ಕತ್ತಿಯಿಂದ ಕಡಿದು ಬಿಕ್ಷೆ ಬೇಡುವಂತೆ ಮಾಡುತ್ತೇನೆಂದು ಬೆದರಿಕೆ ಹಾಕಿ ಕಳುಹಿಸಿರುತ್ತಾರೆ.

ಇದರಿಂದಾಗಿ ನನ್ನ ಮಗನಾದ ನಂದಿತಾಳು ಈಗ ಒಂದು ವಾರದ ಹಿಂದೆ ನನ್ನ ಮನೆಗೆ ಬಂದಿರುತ್ತಾಳೆ. ನಾನು ನನ್ನ ಕುಟುಂಬಸ್ಥರನ್ನು ಕರೆದುಕೊಂಡು ಕೂಡನಹಳ್ಳಿ ಗ್ರಾಮಕ್ಕೆ ಹೋಗಿ ರಾಜಿ ತೀರ್ಮಾನ ಮಾಡಲು ತೀರ್ಮಾನಿಸಿದ್ದೆ. ಆದರೆ ನಿನ್ನ ಅಂದರೆ ದಿನಾಂಕ 21.07.2023ರಂದು ಸಕಲೇಶಪುರ ಗ್ರಾಮಾಂತರ ಪೋಲಿಸರು ಕರೆಮಾಡಿ ಸೋಮಶೇಖರ್ ನಿಮ್ಮ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದಾರೆ, ನೀವು ಬನ್ನಿ ಎಂದು ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗಳು ಹಾಗೂ ನಮ್ಮಗಳ ಸಂಬಂಧಿಕರು ಪೋಲಿಸ್ ಠಾಣೆಗೆ ಬಂದು ಪೋಲಿಸ್ ರು ಇಬ್ಬರಿಗೂ ಬುದ್ಧಿವಾದಗಳನ್ನು ಹೇಳಿ ಹಾಸನದಲ್ಲಿಯೇ ಪ್ರತ್ಯೇಕ ಮನೆಯನ್ನು ಮಾಡಿಕೊಂಡು ವಾಸವಾಗಿರುವಂತೆ ತಿಳಿಸಿದ್ದಲ್ಲದೆ, ನೀವು ಹಾಸನದಲ್ಲಿ ಪ್ರತ್ಯೇಕ ಮನೆ ಮಾಡುವವರೆಗೆ ನಂದಿತಳು ಬಂದಿಹಳ್ಳಿ ಗ್ರಾಮದ ನಮ್ಮ ಮನೆಯಲ್ಲಿಯೇ ಇರಲಿ ಎಂದು ತಿಳಿಸಿ ಕಳುಹಿಸಿರುತ್ತಾರೆ.

ರಾತ್ರಿ ಸೋಮಶೇಖರ್ ನನ್ನ ಮಗಳೊಂದಿಗೆ ಮೊಬೈಲ್ ಕರೆಮಾಡುತ್ತಿದ್ದರು. ಆದರೆ ಏನು ಮಾತನಾಡಿಕೊಂಡರು ಎಂಬುದು ನಮಗೆ ಗೊತ್ತಿರುವುದಿಲ್ಲ ಆದರೆ ನನ್ನ ಮಗಳು ರಾತ್ರಿ ಪೂರಾ ಅಳುತ್ತಲೇ ಇದ್ದಳು ಎಂದು ಅವರ ತಂದೆ ದೂರಿನಲ್ಲಿ ತಿಳಿಸಿದ್ದಾರೆ.ದಿನಾಂಕ 22.07.2023ರಂದು ಬೆಳಗ್ಗೆ 5:30 ಗಂಟೆಗೆ ತೋಟದ ಕೆಲಸಕ್ಕೆ ಹೋಗಿರುತ್ತೇವೆ. ಆದರೆ ಬೆಳಗ್ಗೆ 10:00 ಗಂಟೆಯ ಸಮಯದಲ್ಲಿ ನನ್ನ ಅಣ್ಣನ ಮಗನಾದ ಸಂದೀಪನು ನನ್ನ ಮನೆಯ ಬಳ ಹೋದಾಗ ನಂದಿತಳು ನೇಣುಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಗ್ರಾಮಸ್ಥರಿಗೆ ವಿಷಯ ಗೊತ್ತಾಗಿ ಹಾಗೆ ನನಗೂ ಸಹ ವಿಷಯ ಗೊತ್ತಾದರಿಂದ ನಾನು ತಕ್ಷಣ ಮನೆಗೆ ಬಂದು ನೇಣು ಹಾಕಿದ್ದ ಸ್ಥಿತಿಯಲ್ಲಿದ್ದ ನನ್ನ ಮಗಳನ್ನು ಇಳಿಸಿ ಸಕಲೇಶಪುರದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಿಂದ ಪರಿಶೀಲಿಸಿದಾಗ ನಂದಿತಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ನನ್ನ ಮಗಳು ಮೃತಪಡಲು ನನ್ನ ಅಳಿಯ ಸೋಮಶೇಖರ್ ಮತ್ತು ಈತನ ತಾಯಿ ಮುಟ್ಟಿ ಇವರುಗಳೇ ಕಾರಣರಾಗಿರುತ್ತಾರೆ. ಇವರುಗಳು ನನ್ನ ಮಗಳಿಗೆ ಹಿಂಸೆ, ಕಿರುಕುಳ, ವರದಕ್ಷಿಣೆ ಬೇಡಿಕೆ ಇಡದಿದ್ದರೆ ನನ್ನ ಮಗಳು ಜೀವಂತವಾಗಿರುತ್ತಿದ್ದಳು ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಇವರುಗಳೇ ಕಾರಣರಾಗಿರುತ್ತಾರೆ. ಆದುದರಿಂದ ಮೇಲ್ಕಂಡ ಸೋಮಶೇಖರ್ ಮತ್ತು ಈತನ ತಾಯಿ ಮುಟ್ಟಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ದೊರಕಿಸಿಕೊಟ್ಟು ಸಕಲೇಶಪುರದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯ ಶವಗಾರದಲ್ಲಿರುವ ನನ್ನ ಮಗಳ ಮತದೇಹದ ಮುಂದಿನ ಕಾರ್ಯಗಳಿಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *