ಹಾಸನ : ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಾಟಕೋತ್ಸವ ಪ್ರದರ್ಶನ ,ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಹಲವಾರು ವಿಷಯಗಳ, ಹಾಗೂ ಮಾಹಿತಿ ನೀಡಿತ್ತಾ ನಮ್ಮ ಸಂಸ್ಕೃತಿ. ಬಸವಾದಿ ಶಿವ ಶರಣರ ತತ್ವ ಸಿದ್ಧಾಂತಗಳನ್ನು ಸಂದೇಶಗಳನ್ನು ಎಲ್ಲಾ ವರ್ಗದ ಜನರಿಗೆ ತಿಳಿಸುವ ಉದ್ದೇಶವಾಗಿದೆ ಎಂದು ಹಾಸನ ತಣ್ಣೀರು ಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯ ಕುಮಾರ್ ಸ್ವಾಮಿಜಿ ದಿನಾಂಕ 22-12-2024- ರಂದು ಸಂಜೆ ನಡೆದ ತರಳಬಾಳು ಸಾಣೇಹಳ್ಳಿ ಮಠದ ಶಿವಸಂಚಾರ ನಾಟಕ ತಂಡದವರು ತುಲಾಭಾರ ನಾಟಕ್ಕೊತ್ಸವದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು
ತರಳಬಾಳು ಇಪ್ಪತ್ತುನೇಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕ ಲೆ ಸಾಹಿತ್ಯ, ಸಂಗೀತ ಧರ್ಮ ಕೃಷಿ ಹೀಗೆ ಬದುಕಿನ ಪರಿ ಪೂರ್ಣತೆಗೆ ಬೇಕಾದ ಎಲ್ಲಾ ಕ್ಷೇತ್ರಗಳಲ್ಲೂ ಅರಿವು ಮೂಡಿಸಲು 1950ರಲ್ಲಿ ರಲ್ಲಿ ಶಿವಕುಮಾರ ಕಲಾ ಸಂಘ ಸ್ಥಾಪನೆ ಮಾಡಿ ಇಂದು ನಾಡಿನೆಲ್ಲೆಡೆ ರಾಜ್ಯ ಹೊರ ರಾಜ್ಯಗಳಲ್ಲಿ, ವೀದೇಶಗಳಲ್ಲಿ ಸಂಚಾರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೀದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಹಾಸನ ಆಕಾಶವಾಣಿ ಕೇಂದ್ರದ ಮುಖ್ಯ ಅಯೋಜಕರಾದ ಡಾ ವೀಜಯ ಅಂಗಡಿ ಮಾತನಾಡಿ ಶಿವ ಸಂಚಾರ ನಾಟಕೋತ್ಸವದ ಮೂಲಕ 12 ನೇ ಶತಮಾನದ ಬಸವಾದಿ ಶಿವ ಶರಣರ ಸಮಾಜದ ಧಾರ್ಮಿಕ ಪರಿವರ್ತನೆಗಾಗಿ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವ ಕಾರ್ಯಕ್ರಮಗಳನ್ನು ರೂಪಿಸಿ ಜಾತಿ ಲಿಂಗ ಬಡ ಬಲ್ಲಿದ ಮೇಲು ಕೀಳು ಎನ್ನುವ ತಾರತಮ್ಯ ವನ್ನು ಕಿತ್ತೆಸೆದು ಸರ್ವ ಸಮಾನತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ನಾಟಕಗಳು ಜನರಿಗೆ ವಿಚಾರ ಮುಟ್ಟೀಸುತ್ತ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವ ಸಂಚಾರ ನಾಟಕೋತ್ಸವದ ಸಂಚಾಲಕರಾದ ಹೆಬ್ಬಾಳು ಭೂವನೇಶ್ ವಹೀಸಿದ್ದರು.ಕಾರ್ಯಕ್ರಮದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಅಧ್ಯಕ್ಷ ರಾದ ಕಟ್ಟಾಯ ಶಿವಕುಮಾರ್.ಉಪಾಧ್ಯಾಕ್ಷರಾದ ಹೆಚ್ ಪಿ ಹೇಮೇಶ್. ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಅಧ್ಯಕ್ಷರಾದ ಪ್ರದೀಪ್. ಕಾರ್ಯದರ್ಶಿ ಶೆಟ್ಟಿ ಹಳ್ಳಿ ಧರ್ಮ. ನಿರ್ದೇಶಕರಾದ ಟಿ ಪಿ ನಾಗರಾಜ್. ಮದನ್ . ಸಾವಿತ್ರಮ್ಮ. ಬಿಜೆಪಿ ಮುಖಂಡರಾದ ಹೆಚ್ ಎನ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು. ನಾಟಕ ನೊಡಲು ಸಾರ್ವಜನಿಕರು ಭಾಗವಹಿಸಿದ್ದರು.