ಸಕಲೇಶಪುರ :- ತಾಲ್ಲೂಕಿನ ಕೃಷಿಕ ಸಮಾಜದ ಐದು ವರ್ಷಗಳ ಅವಧಿಗೆ ಮೂರನೆಯ ಬಾರಿಗೆ ಇಂದು ಕೃಷಿ ಇಲಾಖೆಯಲ್ಲಿ ನಡೆದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ 15 ನಿರ್ದೇಶಕರಿಗೆ ಮತದಾನ ಹಕ್ಕು ಪಡೆದಿದ್ದರು ಇದರಲ್ಲಿ 14 ನಿರ್ದೇಶಕರು ಮತ ಚಲಾವಣೆ ಮಾಡಿದರು
ಚಲಾವಣೆಯಾದ ಮತಗಳಲ್ಲಿ 11 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಪ್ರಕಾಶ್ ವಿರುದ್ದ ಪ್ರಚಂಡ ವಿಜಯ ಸಾಧಿಸಿ ಮೂರನೇ ಬಾರಿಗೆ ಬಿ ಜೆ ಪಿ ಹಿರಿಯ ಮುಖಂಡ ರಾದ ಹೆತ್ತೂರು ದೇವರಾಜ್ ಆಯ್ಕೆ ಆಗಿದ್ದಾರೆ,
ಜಿಲ್ಲಾ ಪ್ರತಿನಿಧಿ ಆಯ್ಕೆಗೆ ಸ್ಪರ್ಧಿಸಿದ್ದ ಎಂ ಆರ್ ಸಂಪತ್ ಕುಮಾರ್ ಪ್ರತಿಸ್ಪರ್ಧಿ ನಾರಾಯಣ ಆಳ್ವ ವಿರುದ್ದ 10 ಮತ ಪಡೆದು ಜಯಶೀಲರಾಗಿದ್ದಾರೆ
ಇನ್ನುಳಿದ ಉಪಾಧ್ಯಕ್ಷ ಸ್ಥಾನಕ್ಕೆ ಹೊಸರಳ್ಳಿ ಗಣೇಶ್, ಪ್ರಧಾನ ಕಾರ್ಯದರ್ಶಿ ಯಾಗಿ ಮೂಗಲಿ ಕೆ ಎ ಲಿಂಗರಾಜ್, ಖಜಾಂಚಿ ಯಾಗಿ ನಾಗೇಶ್ ಎಂ ಆರ್ ಅವಿರೋಧವಾಗಿ ಆಯ್ಕೆಯಾದರು
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕರಾದ ಯು ಎಂ ಪ್ರಕಾಶ್ ಕುಮಾರ್ ನಿರ್ವಹಿಸಿದರು.