ಸಕಲೇಶಪುರ : ನಿಯಮ ಪಾಲಿಸದೆ ಹೆಲ್ಮೆಟ್ ಹಾಕದೆ ಬೈಕ್ ಸವಾರಿ ಮಾಡುವ ಬೈಕ್ ಚಾಲಕರಿಗೆ ಹಾಗೂ ಸೂಚನಾ ಹಳದಿ ಪಟ್ಟಿಗಳನ್ನು ಹಾಕದ ಟ್ರಾಕ್ಟರ್ ಮತ್ತು ಟ್ಯಾಕ್ಸಿಗಳಿಗೆ ಇಂದು ಪಟ್ಟಣದ ನಗರ ಠಾಣಾ ಪೋಲೀಸರು ಬೈಕ್ ಸವಾರರಿಗೆ ಗುಲಾಬಿ ನೀಡುವ ಮೂಲಕ ಟ್ರಾಕ್ಟರ್ ಗಳಿಗೆ ಹಳದಿ ರಿಫ್ಲೆಟ್ ಪಟ್ಟಿಗಳನ್ನು ಅಂಟಿಸುವ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ವಜೀರ್, ವಾಹನ ಚಾಲಕ ರಘು ಇದ್ದರು.