ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಪರಿಣಾಮ ಆಘಾತಗಳ ಸಂಖ್ಯೆಯೂ ಹೆಚ್ಚಾಗತೊಡಗಿದ್ದು ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಒಂದೇ ಸ್ಥಳದಲ್ಲಿ ಎರಡು ವಾಹನಗಳು ಅಪಘಾತಗೊಂಡ ಘಟನೆ ನಡೆದಿದೆ.ಬಣಕಲ್ ಸಮೀಪ ಹೇಮಾವತಿ ನದಿಗೆ ಮಾರುತಿ ಎಸ್ಟೀಮ್ ಕಾರು ಹಾಗೂ ಇನೋವಾ ಕಾರು ಪಲ್ಟಿಯಾಗಿ ಎರಡೂ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಚಿಕ್ಕಮಗಳೂರು ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಈ ವೇಳೆ ಪುತ್ತೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದ ಇನೋವಾ ಕಾರು ಬಣಕಲ್ ಹೆದ್ದಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ.