ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ ರಕ್ಷಿದಿ ಗ್ರಾಮದ ರಂಗಕರ್ಮಿ , ಸಾಮಾಜಿಕ ಚಿಂತಕ ,ಹಾಗೂ ಬರಹಗಾರರಾದ ಪ್ರಸಾದ್ ರಕ್ಷಿದಿ ಅವರ ಮನೆಯ ಮೇಲೆ ಅತಿಯಾದ ಗಾಳಿ ಮಳೆಗೆ ಅವರ ಮನೆಯ ಪಕ್ಕದಲ್ಲಿ ಬೆಳೆದಿದ್ದ ತೆಂಗಿನ ಮರ ರಾತ್ರಿ ಸುಮಾರು 11 ಘಂಟೆಯ ಸಮಯದಲ್ಲಿ ಮನೆಯ ಮುಂಭಾಗಕ್ಕೆ ಬಿದ್ದು ಭಾಗಶಃ ಹಾನಿಯಾಗಿದ್ದು ಅದೃಷ್ಟವಶಾತ್ ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಹಾನಿಯಾಗುವುದು ತಪ್ಪಿದಂತಾಗಿದೆ.
ಪ್ರಸಾದ್ ರಕ್ಷಿದಿ ಅವರು ಕಾರ್ಯಕ್ರಮದ ನಿಮಿತ್ತ ಅವರ ಕುಟುಂಬದೊಂದಿಗೆ ಸಾಗರಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದಂತಾಗಿದೆ. ಸ್ಥಳಕೆ ತಾಲೂಕು ಆಡಳಿತ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.