ಹಾಸನ : ಮೈಸೂರು ಜಿಲ್ಲೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ 2025 ರ ಜನವರಿ 26 ರಿಂದ 31 ರವರಿಗೆ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸುತ್ತೂರು ಮಠದ ಜಾತ್ರೋತ್ಸವ ನಡೆಯಲಿದೆ ಇದರ ಅಂಗವಾಗಿ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ಸಂಚಾರಿ ರಥ ಯಾತ್ರೆ ದಿನಾಂಕ 3o-12-2024 ಸೋಮವಾರ ಮಧ್ಯಾಹ್ನ 2-00-ಕ್ಕೆ ಬೇಲೂರು. 3-30 ಕ್ಕೆ ಹಗರೆ ಮಾರ್ಗವಾಗಿ 4-00 ಘಂಟೇಗೆ ಹಾಸನ ನಗರದ ತಣ್ಣೀರು ಹಳ್ಳ ಸರ್ಕಲ್ ನಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಹಾಗೂ ಸಾರ್ವಜನಿಕರಿಂದ ಸ್ವಾಗತಿಸಲಾಗುತ್ತದೆ.

ನಂತರ ತಣ್ಣೀರು ಹಳ್ಳ ಮಠಕ್ಕೆ ಆಗಮಿಸುವುದು ಶ್ರೀ ತಣ್ಣೀರು ಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯ ಕುಮಾರ್ ಸ್ವಾಮಿಜಿ ರವರ ಸಮ್ಮುಖದಲ್ಲಿ ಶ್ರೀ ತಣ್ಣೀರು ಹಳ್ಳ ಮಠದ ವತಿಯಿಂದ ಪೂಜೆ ಸಲ್ಲಿಸಲಾಗುತ್ತದೆ, ನಂತರ 5-00 ಘಂಟೆಗೆ ಹಾಸನ ಮಹಾವೀರ ಸರ್ಕಲ್ ಬಳಿ ಹಾಸನ ಜಿಲ್ಲಾ ವೀರಶೈವ ಲಿಂಗಾಯತ ವೇದಿಕೆಯಿಂದ ಸ್ವಾಗತಿಸಲಾಗುವುದು‌.

ನಂತರ ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಸಂಘದ ವತಿಯಿಂದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಹಾಸನ ಜವೇನಹಳ್ಳಿ ಮಠದ ವತಿಯಿಂದ ಶ್ರೀ ಸುತ್ತೂರು ಮಠದ ರಥಯಾತ್ರೆಗೆ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಠಾಧೀಶರು ಜವನಹಳ್ಳಿ ಮಠ ಇವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ನಂತರ ಆಲೂರು, ಬಾಳ್ಳುಪೇಟೆ ಮುಖಾಂತರ ಸಕಲೇಶಪುರದ ಶ್ರೀ ಗುರುವೆಗೌಡ ಕಲ್ಯಾಣ ಮಂಟಪಕ್ಕೆ ತಲುಪುವುದು ದಿನಾಂಕ 31-12-2024 ರಂದು ಬೆಳಿಗ್ಗೆ ಮೇರವಣಿಗೆ ನಂತರ ಅರಕಲಗೂಡು ತಾಲ್ಲೂಕಿಗೆ ತಲುಪುವುದು.

ಈ ಎಲ್ಲಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ವೀರಶೈವ ಲಿಂಗಾಯತ ಸಮಾಜದವರು ಭಾಗವಹಿಸಲು ಕೋರಲಾಗಿದೆ.

ಕಟ್ಟಾಯ ಶಿವಕುಮಾರ್ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಘಟಕ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed