ಬಿಜೆಪಿ ಅಸಂವಿಧಾನದ ಆಡಳಿತದ ವಿರುದ್ದ ಗುಡುಗಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಸಕಲೇಶಪುರ : ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸಂವಿಧಾನದ ವಿರುದ್ದ ಆಡಳಿತ ನಡೆಸಿದ್ದು ಈ ಸರ್ಕಾರವನ್ನು ಜನ ಕಿತ್ತೊಗೆಯಬೇಕು ಎಂದು ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಶನಿವಾರ ತಾಲೂಕಿನ ಬಾಳ್ಳುಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಕಂಟ್ರಾಕ್ಟರ್ ಗಳ ಹತ್ತಿರ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುವುದನ್ನು ಪರಿಪಾಠ ಮಾಡಿಕೊಂಡಿದ್ದು ಈ ರೀತಿ ಆದರೆ ಗುಣಮಟ್ಟದ ಕೆಲಸ ಮಾಡಲು ಹೇಗೆ ಸಾಧ್ಯ, ಬಿಜೆಪಿ ಸರ್ಕಾರದಲ್ಲಿ ವರ್ಗಾವಣೆ ದಂದೆ ನಡೆಯುತ್ತಿದ್ದು, ಡಿವೈಎಸ್ಪಿ, ತಹಶೀಲ್ದಾರ್, ಪಿಎಸ್ ಐ ವರ್ಗಾವಣೆಯಲ್ಲಿ ಲಂಚ ನಡೆಯುತ್ತಿದೆ ಇಂತಹ ಸರ್ಕಾರ ನಡೆಸುವವರಿಗೆ ಕರ್ನಾಟಕ ರಾಜ್ಯಕ್ಕೆ ಗೌರವಿರುವುದಿಲ್ಲ. ಈ ಸರ್ಕಾರದಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಕೆಲಸ ನಡೆಯುತ್ತಿದ್ದು ದುಡ್ಡು ಇಲ್ಲದವರಿಗೆ ಕೆಲಸ ನಡೆಯುವುದಿಲ್ಲ. 38 ವರ್ಷ ಎಮ್ ಎಲ್ ಎ, ಆಗಿ 5 ಬಾರಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ ಈಗ ನಿಮ್ಮೆಲ್ಲರ ಆಶೀರ್ವಾದದಿಂದ ಎಐಸಿಸಿ ಅಧ್ಯಕ್ಷನಾಗಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದೇನೆ ,. ನನ್ನ ಈ ವರೆಗಿನ ರಾಜಕೀಯ ಜೀವನದಲ್ಲಿ ಬೊಮ್ಮಾಯಿಯಂತಹ ಭ್ರಷ್ಟ ಮುಖ್ಯ ಮಂತ್ರಿಗಳನ್ನು ನೋಡಿಲ್ಲ ಮೋದಿ ಹೇಳುತ್ತಾರೆ ನಾನು ತಿನ್ನಲ್ಲ ತಿನ್ನಲು ಬಿಡಲ್ಲ ಎಂದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ನಿಮ್ಮದೇ ಸರ್ಕಾರವಾಗಿದ್ದು 40 ,ಪರ್ಸೆಂಟ್ ಕಮಿಷನ್ ಪಡೆಯುವ ಸರ್ಕಾರವಾಗಿದ್ದು ಇದು ಒಳ್ಳೆಯ ಸರ್ಕಾರವಾಗುತ್ತದೆ. ಗುಜರಾತಿನ ಅಹಮದಾಬಾದ್ ಚುನಾವಣೆ ನಡೆಯುವಾಗ ಮೋದಿಯವರು ನಾನು ಈ ನೆಲದ ಮಗ, ವೊಟು ಕೊಡಿ ಎಂದು ಕೇಳುತ್ತಾರೆ. ಆದರೆ ನಾನು ಈ ದಿನ ಹೇಳುತ್ತಿದ್ದೇನೆ ನಾನು ಈ ನೆಲದವನೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರವರು ಈ ನೆಲದವರೇ ನಮ್ಮನ್ನು ನೋಡಿ ವೋಟು ಕೊಡಿ, ನರೇಂದ್ರ ಮೋದಿಯವರು ಎಂಎಲ್ಎ ಆಗದೆ ಮೂರು ಬಾರಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಮೋದಿಯವರಿಗೆ ಸಾಮಾನ್ಯ ಜನರ ಕಷ್ಟಗಳು ಗೊತ್ತಿಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದಲ್ಲಿ ದೊಡ್ಡ ದೊಡ್ಡ ಡ್ಯಾಮ್ ಗಳನ್ನು ನಿರ್ಮಾಣ ಮಾಡಿದೆ, ಕೈಗಾರಿಕೆಗಳನ್ನು ಪ್ರಾರಂಭ ಮಾಡುವ ಮೂಲಕ ನಿರುದ್ಯೋಗಗಳಿಗೆ ಉದ್ಯೋಗ ನೀಡಿದೆ. ದೇಶದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದರ ಮೂಲಕ ಬಡ ಜನರ ಏಳಿಗೆಗೆ ಅನೇಕ ಕೊಡುಗೆಗಳನ್ನು ನೀಡಿದೆ ಆದರೆ ಕೇಂದ್ರದಲ್ಲಿ ಎರಡು ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ನಿಮ್ಮಗಳ ಕೊಡುಗೆ ಏನು ಎಂದರು .ಬಿಜೆಪಿ ಸರ್ಕಾರದ ಹೋಂ ಮಿನಿಸ್ಟರ್ ಹೇಳುತ್ತಾರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದಂಗೆ ಹೇಳುತ್ತದೆ ಎಂದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ದಂಗೆ ಎದ್ದಿದೆ ತೋರಿಸಿ ಎಂದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಸಂವಿಧಾನಕ್ಕೆ ಅನುಗುಣವಾಗಿ ಸರ್ಕಾರ ನಡೆಸಿದೆ ರಾಹುಲ್ ಗಾಂಧಿ ಯವರ ಮೇಲೆ ಪ್ರಕರಣ ದಾಖಲಿಸಿ ಒಂದೆ ದಿನ ಕನ್ವಿಕ್ಷನ್ ಮಾಡುತ್ತೀರಿ ಆದರೆ ಬಿಜೆಪಿ ಎಂ.ಪಿ ನಾರಾಯಣ್ ಕಜೋರೊಯಾ ರವರು ರೈತರು ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದು ತಡವಾಗಿ ಬಂದ ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ್ದು, ಈ ಬಗ್ಗೆ ವೈದ್ಯರು ಪ್ರಕರಣ ದಾಖಲಿಸಿದಾಗ, ಬಿಜೆಪಿ ಎಂ.ಪಿ ಯವರು ಕೋರ್ಟಿಗೆ ಹೋಗಿ ಕೇಸು ವಜಾ ಆಗುವವರೆಗೆ ಸಮಯಾವಕಾಶ ನೀಡಿದರು. ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯಾರ್ಥಿ ವೇತನ ಮಂಜೂರು ಆಗುತ್ತಿಲ್ಲ ತಪ್ಪು ಮಾಡಿದವರಿಗೆ ಜೈಲಿಗೆ ಕಳುಹಿಸಿ, ತಪ್ಪು ಮಾಡದವರಿಗೆ ಜೈಲಿಗೆ ಕಳುಹಿಸುತ್ತಾರೆ ಈಗ ರಾಜ್ಯದಲ್ಲಿ 2 ಲಕ್ಷ 50 ಸಾವಿರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಿಲ್ಲ. 69 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ತಿಳಿಸಿದ್ದರು , ಈಗ 9 ವರ್ಷಗಳಲ್ಲಿ 18 ಕೋಟಿ ಕೆಲಸ ಸೃಷ್ಟಿಸಬೇಕಾಗಿತ್ತು ಆದರೆ ಆಗಿಲ್ಲ. 9 ವರ್ಷ ಕಳೆದರೂ ಕಪ್ಪು ಹಣ ವಾಪಸ್ ತರಿಸುತ್ತೇವೆ ಎಂದರು ಆ ಕೆಲಸವು ಆಗಿಲ್ಲ ಕಾಂಗ್ರೆಸ್ ಸರ್ಕಾರದ ಬಗ್ಗೆ ಇಲ್ಲದ ಆಪಾದನೆಯನ್ನು ಸೃಷ್ಟಿ ಮಾಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಪಂಡಿತ್ ಜವಹರಲಾಲ್ ನೆಹರು ಶಾಲೆ ಕಾಲೇಜು ಗಳನ್ನು ಮಾಡದಿದ್ದರೆ ನೀವು ಓದಲು ಸಾಧ್ಯ ವಾಗುತ್ತಿರಲಿಲ್ಲ ನಿಮ್ಮ ಕಾಲದಲ್ಲಿ ಶ್ರೀಮಂತರನ್ನು ಶ್ರೀಮಂತರಾಗಿ ಮಾಡುತ್ತೀದ್ದೀರಿ ನಾವು 4 ಗ್ಯಾರಂಟಿ ಕೊಟ್ಟಿದ್ದೇವೆ 200 ಯುನಿಟ್ ಕರೆಂಟ್ ಪ್ರೀ, ಮಹಿಳೆಯರಿಗೆ ತಿಂಗಳಿಗೆ 2000 ಸಾವಿರ ಪ್ರೀ, 7 ಕೆಜಿಯಿಂದ 10 ಕೆಜಿ ಅಕ್ಕಿ ಪ್ರೀ, ಡಿಪ್ಲೊಮಾ ವೊಲ್ಡರ್ 3000 ರೂ ಕೊಡುತ್ತೇವೆ, ನಿರುದ್ಯೋಗಿ ಯುವಕರಿಗೆ ಒಂದುವರೆ ಸಾವಿರ ರೂ ಕೊಡುತ್ತೇವೆ ತಾಯಂದಿರಿಗೆ ಬಸ್ಸಿನಲ್ಲಿ ಓಡಾಡಲು ಉಚಿತ ಬಸ್ ಪಾಸ್ ಕೊಡುವ ಬಗ್ಗೆ ತಿಳಿಸಿದ್ದೇವೆ ಮೋದಿಯವರು ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಅಂದಿದ್ದರು ಏನು ಮಾಡಿದ್ದಾರೆ ಫರ್ಟಿಲೈಸರ್ ಬೆಲೆ ಹೆಚ್ಚಾಗಿದೆ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟು ಮುರಳಿ ಮೋಹನ್ ರವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.ಡಿ.ಕೆ.ಶಿವಕುಮಾರ್ ಮಾತನಾಡಿ ಇಷ್ಟು ಜನರನ್ನು ನೋಡಿದರೆ ಕನಕಪುರದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಅನುಭವವಾಗುತ್ತಿದೆ . ಇಂದಿರಾಗಾಂದಿ ಅಧಿಕಾರ ಅವಧಿಯಲ್ಲಿ ಉಳುವವನೆ ಭೂಮಿಯ ಒಡೆಯ, ಬಡತನ ನಿರ್ಮೂಲನೆ, ಉದ್ಯೋಗ ಖಾತ್ರಿ ಯೋಜನೆ, ಮುಂತಾದ ಹಲವಾರು ಯೋಜನೆಗಳನ್ನು ತರುವ ಮೂಲಕ ಬಡಜನರ ಏಳಿಗೆಗೆ ಶ್ರಮಿಸಿದ್ದಾರೆ. ಖರ್ಗೆ ಸಾಹೇಬ್ರು ಹೇಳಿದರು ಮೋದಿ ಕಪ್ಪು ಹಣವನ್ನು ತಂದು ರೈತರ ಅಕೌಂಟಿಗೆ ಹಾಕುತ್ತೇವೆಂದು ಆದರೆ ಇವರಿಗೆ ರೈತರ ಅಕೌಂಟಿಗೆ ಹಣ ಸೇರಿಲ್ಲ. ಎಚ್. ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಗಳನ್ನಾಗಿ ಮಾಡಿದೆವು, ಬಿಜೆಪಿಯವರೊಂದಿಗೆ ಹೋಗಿ ಅಧಿಕಾರವನ್ನು ಉಳಿಸಿಕೊಳ್ಳಲಿಲ್ಲ ಜೆಡಿಎಸ್ ಪಕ್ಷದಿಂದ ಮುಖ್ಯಮಂತ್ರಿ ಆಗಲು ಅಥವಾ ಮಂತ್ರಿಯಾಗಲು ಸಾಧ್ಯವಿಲ್ಲ ಡಬ್ಬಲ್ ಇಂಜಿನ್ ಸರ್ಕಾರದಿಂದ ಯಾವುದೂ ಅನುಕೂಲ ಆಗಿಲ್ಲ. ಖರ್ಗೆ ಸಾಹೇಬರು ದೀಕ್ಷೆ ಕಟ್ಟಿದ್ದಾರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಈ ಕ್ಷೇತ್ರದಲ್ಲಿ 75 ಸಾವಿರ ದಲಿತರಿದ್ದಾರೆ ನನ್ನ ಮಿತ್ರ ಮುರುಳಿ ಮೋಹನ್ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಿ.ಎಸ.ಪುಟ್ಟೇಗೌಡ , ಡಿ.ಮಲ್ಲೇಶ್, ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್, ಹಾಸನ ಜಿಲ್ಲಾ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ಅನೀಲ್, ಡಿ.ಸಿ.ಸಣ್ಣಸ್ವಾಮಿ, ಹೆಚ್.ಕೆ.ಮಹೇಶ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಅಬ್ದಲ್ ಸಮ್ಮದ್, ತಾಲೂಕು ಅಧ್ಯಕ್ಷ ಬೈರಮುಡಿ ಚಂದ್ರು, ಕೆಪಿಸಿಸಿ ಸದಸ್ಯರಾದ ಎಡೆಹಳ್ಳಿ ಆರ್ ಮಂಜುನಾಥ್, ಕೊಲ್ಲಹಳ್ಳಿ ಸಲೀಂ, ಹೆಚ್.ಹೆಚ್.ಉದಯ್, ಕರಡಿಗಾಲ ಕೃಷ್ಣೇಗೌಡ ಇತರರು ಇದ್ದರು