ಹಲ್ಲೆಗೊಳಗಾಗಿ ಠಾಣೆಯಲ್ಲಿ ದೂರು ನೀಡುತಿದ್ದ ಬಜರಂಗದಳದ ಶಿವು (ಜಿಪ್ಪಿ)ಗೆ ಕಪಾಳ ಮೋಕ್ಷ ಮಾಡಿದ ಹಾಸನ ಅಪಾರ ಪೊಲೀಸ್ ವರಿಷ್ಠಾಧಿಕಾರಿಯಾದ ತಮ್ಮಯ್ಯ, ಬಜರಂಗದಳ ಕಾರ್ಯಕರ್ತರಿಂದ ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು.

ಭಾನುವಾರ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇಖಲ ಗ್ರಾಮದಲ್ಲಿ ಕೆಲ ಮುಸ್ಲಿಂ ಯುವಕರಿಂದ ಕಲ್ಲರಳ್ಳಿ ಗ್ರಾಮದ ರವಿ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅವರ ಬಾಡಿಗೆ ಕಾರನ್ನು ಜಖಂ ಮಾಡಿದ್ದರು.

ಈ ಸಂಬಂಧ ಸರ್ಕಾರಿ ಕ್ರಾಪರ್ಡ್ ಆಸ್ಪತ್ರೆಯಲ್ಲಿ ರವಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಿತ ರವಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಬಜರಂಗದಳ ತಾಲೂಕಿನ ಸಹಸಂಚಾಲಕ್ ಶಿವು ಜಿಪ್ಪಿ ಅವರ ಮೇಲೆ ರವಿಗೆ ಹಲ್ಲೆ ಮಾಡಿದ ಅದೇ ಗುಂಪಿನ ಯುವಕರು ಶಿವು ಮೇಲು ಸಹ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಹಲ್ಲೆ ಮಾಡಿದ್ದು.

ಈ ಸಂಬಂಧ ನಗರ ಠಾಣೆಯಲ್ಲಿ ದೂರು ನೀಡಲು ಠಾಣೆಗೆ ಬಂದಿದ್ದ ಬಜರಂಗದಳ ತಾಲೂಕಿನ ಸಹಸಂಚಾಲಕ್ ಶಿವು ಜಿಪ್ಪಿ ಮೇಲೆ ರಾತ್ರಿ 10:20ರ ಸುಮಾರಿಗೆ ನಗರ ಠಾಣೆಗೆ ಆಗಮಿಸಿದ ಹಾಸನ ಜಿಲ್ಲಾ ಅಪರ ವರಿಷ್ಠಾಧಿಕಾರಿ ತಮ್ಮಯ್ಯ ವಾಸ್ತವತೆ ವಿಚಾರಿಸದೆ ಏಕಾಏಕಿ ಕಪಾಳಮೋಕ್ಷ ಮಾಡಿ ಜಾತಿ ನಿಂದಿಸಿ ಇವನ ಮೇಲೆ ಪ್ರಕರಣ ದಾಖಲಿಸಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಸೋಮವಾರ ಬಜರಂಗದಳ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಇಂದು ಬೆಳ್ಳಂ ಬೆಳಿಗ್ಗೆ ಸಕಲೇಶಪುರ ನಗರ ಠಾಣೆಗೆ ಆಗಮಿಸಿದ ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಜೀತಾ ಮಹಮ್ಮದ್ ಅವರ ಸಂಬಂಧ ಪಟ್ಟ ಸಂಘಟಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

ಅಧಿಕಾರ ದುರುಪಯೋಗ ಪಡಿಸಿಕೊಂಡು ದರ್ಪ ಮೆರೆದಿರುವ ಅಪಾರ ವರಿಷ್ಠಾಧಿಕಾರಿ ತಮ್ಮಯ್ಯ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಇಲಾಖಾ ತನಿಖೆಗೆ ಆದೇಶಿಸಬೇಕು ಎಂದು ಪ್ರತಿಭಟನಾ ಮನವಿ ಮೂಲಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೂರಾರು ಮನವಿ ಮಾಡಿದರು.

ಪರಿಸ್ಥಿತಿಯನ್ನು ಅವಲೋಕಿಸಿ ಮನವಿ ಸ್ವೀಕರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾನೂನು ಕ್ರಮದ ಭರವಸೆ ನೀಡಿ ಕಾರ್ಯಕರ್ತರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಮಾತು ಮತ್ತು ಯಾವುದೇ ವಿಷಯದಲ್ಲಿ ಪೋಲಿಸರು ನಿಮ್ಮೊಂದಿಗೆ ಇರುತ್ತಾರೆ ನೀವು ಪೋಲಿಸರ ಸಹಾಯ ಪಡೆದು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಯಾವುದೇ ಅಧಿಕಾರ ಪೋಲಿಸ್ ನಿಮಗೆ ಸ್ಪಂದಿಸದಿದ್ದಲ್ಲಿ ನನ್ನನು ಬೇಟಿ ಮಾಡಿ ಕಾನೂನಿನ ಅಡಿಯಲ್ಲಿ ಪರಿಹರಿಸಲಾಗುವುದು ಮತ್ತು ಹಾಸನ ಜಿಲ್ಲೆಯ ಪೋಲಿಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ ಅಭಯ ನೀಡಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed