
ಸಕಲೇಶಪುರ : ತಡರಾತ್ರಿ ಬಜರಂಗದಳ ಕಾರ್ಯಕರ್ತನ ಮೇಲೆ ಪೋಲಿಸ್ ಅಪಾರ ವರಿಷ್ಠಾಧಿಕಾರಿಯಿಂದ ಕಪಾಳಮೋಕ್ಷ ಹಲ್ಲೆಘಟನೆ , ಪೋಲಿಸ್ ಅಪಾರ ವರಿಷ್ಠಾಧಿಕಾರಿ ತಮ್ಮಯ್ಯ’ರವರಿಗೆ ದೂರವಾಣಿ ಮುಖಾಂತರ ತರಾಟೆ ತೆಗೆದುಕೊಂಡು ಖಡಕ್ ಎಚ್ಚರಿಕೆ ನೀಡಿದ ಮಾನ್ಯ ಶಾಸಕ ಸಿಮೆಂಟ್ ಮಂಜು..
ಭಾನುವಾರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇಖಲ ಗ್ರಾಮದಲ್ಲಿ ಕೆಲ ಮುಸ್ಲಿಂ ಯುವಕರಿಂದ ಕಲ್ಲರಳ್ಳಿ ಗ್ರಾಮದ ರವಿ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅವರ ಬಾಡಿಗೆ ಕಾರನ್ನು ಜಖಂ ಮಾಡಿದ್ದರು.
ಈ ಸಂಬಂಧ ಸರ್ಕಾರಿ ಕ್ರಾಪರ್ಡ್ ಆಸ್ಪತ್ರೆಯಲ್ಲಿ ರವಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸರ್ಕಾರಿ ಕ್ರಾಪರ್ಡ್ ಆಸ್ಪತ್ರೆಗೆ ಆಗಮಿಸಿದ ಶಾಸಕ ಸಿಮೆಂಟ್ ಮಂಜು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಲರಳ್ಳಿ ಗ್ರಾಮದ ರವಿ’ಯನ್ನು ಬೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಸ್ಥಳಕ್ಕೆ ಡಿವೈಎಸ್ಪಿ ಪ್ರಮೋದ್ ಅವರನ್ನು ಕರೆಯಿಸಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ತಪ್ಪಿಸ್ಥತರು ಯಾರೇ ಆಗಲಿ ಬಂಧನ ಮಾಡಬೇಕು ಮಾರಣಾಂತಿಕವಾಗಿ ಹಲ್ಲೆ ಮಾಡುವ ಮಟ್ಟಿಗೆ ಕೆಲ ಮುಸ್ಲಿಂ ಯುವಕರು ಬಂದಿದ್ದಾರೆ ಎಂದರೆ ದುರುದ್ದೇಶ ಪೂರಿತ ಪ್ರಾಯೋಜಿತ ಯೋಜನೆ ಇದು ಎಂದರು. ಹಲ್ಲೆಗೊಳಗಾದ ಕಾರ್ಯಕರ್ತನಿಗೆ ಸಾಂತ್ವನ ಹೇಳಿ ಕಾರ್ಯಕರ್ತರಿಗೆ ದೈರ್ಯ ತುಂಬಿದರು..
ಈ ಸಂದರ್ಭದಲ್ಲಿ ನೆನ್ನೆ ರಾತ್ರಿ ದೂರು ನೀಡಲು ಠಾಣೆಗೆ ದೂರು ನೀಡಲು ಬಂದಿದ್ದ ಕಾರ್ಯಕರ್ತ ಶಿವು ಜಿಪ್ಪಿ ಮೇಲೆ ಅಪಾರ ವರಿಷ್ಠಾಧಿಕಾರಿ ತಮ್ಮಯ್ಯ ಹಲ್ಲೆ ನಡೆಸಿರುವ ವಿಚಾರ ತಿಳಿದ ಶಾಸಕ ಸ್ಥಳದಲ್ಲೇ ಅಪಾರ ವರಿಷ್ಠಾಧಿಕಾರಿಗೆ ಕರೆ ಮಾಡಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ತನಿಖೆ ಹಾದಿ ತಪ್ಪಿಸಿ ದುಸ್ಸಾಹಸ ಮೆರೆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.



