ಅರಸೀಕೆರೆ : ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಗು ಆಹಾರ ತಂತ್ರಜ್ಞಾನ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಜೇನು ಕೃಷಿಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಜೇನುಸಾಕಾಣಿಕೆಯ ಬಗ್ಗೆ ನವಿಸ್ತಾರವಾಗಿ ತಿಳಿಸಿಕೊಟ್ಟರು
ಜೇನುನೊಣಗಳಲ್ಲಿ ಇರುವ ಐದು ಪ್ರಭೇದಗಳು ಅದರಲ್ಲಿ ಸಾಕಲು ಸೂಕ್ತವಾದ ಭಾರತೀಯ ಜೇನುನೊಣ ಹಾಗು ಇಟಾಲಿಯನ್ ಜೇನುನೊಣದ ಬಗ್ಗೆ ಹಾಗೂ ಸಾಕಲು ಬೇಕಾದ ಸೂಕ್ತವಾತಾವರಣದ ಬಗ್ಗೆ ತಿಳಿಸಿಕೊಟ್ಟರು.
ಜೇನು ನೊಣಗಳ ಜಾತಿಗಳಾದ ರಾಣಿನೊಣ ಗಂಡುನೊಣ ಹಾಗು ಕೆಲಸಗಾರ ನೊಣಗಳ ಕಾರ್ಯವನ್ನು ತಿಳಿಸಿದರು. ಜೇನು ಸಾಕಣಿಗೆ ಬೇಕಾದ ಉಪಕರಣವನ್ನು ಜೇನು ಕುಟುಂಬ ಪಾಲಾಗುವಿಕೆ ,ಪಾಲಾದ ಜೇನುಕುಟುಂಬವನ್ನು ಹಿಡಿಯುವುದು ಹಾಗು ವಿವಿಧ ಋತುಗಳಲ್ಲಿ ಜೇನುನೊಣಗಳ ನಿರ್ವಹಣೆ ಹಾಗು ಜೇನುನೊಣಗಳ ಪರಾಗಸ್ಪರ್ಶದಿಂದ ವಿವಿಧ ಬೆಳೆಗಳಲ್ಲಿ ಉಂಟಾಗುವ ಅಧಿಕ ಇಳುವರಿಯ ಬಗ್ಗೆ ತಿಳಿಸಿಕೊಟ್ಟರು .
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸುನಿತಾ ಟಿ. ಆರ್ ಸಹಾಯಕ ಪ್ರಾಧ್ಯಾಪಕರು ಕೀಟ್ ಶಾಸ್ತ್ರ ವಿಭಾಗ ಇವರು ಆಗಮಿಸಿ ರೈತರಿಗೆ ಹೆಚ್ಚಿನ ಮಾಹಿತಿ ನೀಡಿದರು.