ಸಕಲೇಶಪುರ : ಪ್ರತಿವರ್ಷ ಕೂಡ ಜನವರಿ ಒಂದರಂದು ಹೊಸ ವರ್ಷದ ಸಂಭ್ರಮದ ದಿನವಾದರೆ ಭಾರತದ ದಲಿತರ ಪಾಲಿಗೆ ಇದು ಮಹಾರಾಷ್ಟ್ರದ ಪೇಶ್ವೆಗಳ ಕಾಲದಲ್ಲಿನ ಅಸ್ಪೃಶ್ಯತೆ ವಿರುದ್ಧ ಬಂಡೆದ್ದು ಕೆಚ್ಚೆದೆ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನ ಈ ದಿನ ಶೋಷಿತರ ಆತ್ಮ ಗೌರವ ತಲೆಯೆತ್ತಿದ ದಿನವೆಂದೆ ಇತಿಹಾಸದಲ್ಲಿ ಪ್ರಸಿದ್ಧಿಯಾಗಿದೆ ಹಾಗಾಗಿ 1/01/2024ಕ್ಕೆ ಸರಿಯಾಗಿ 206 ನೇ ವರ್ಷದ ವಿಜಯೋತ್ಸವವನ್ನು ಭೀಮ ಕೊರಂಗಾವ್ ವಿಜಯೋತ್ಸವ ಎಂದು ಆಚರಣೆ ಮಾಡಲಾಗುತ್ತಿದೆ
ಸಕಲೇಶಪುರದಲ್ಲಿ ಸತತ 7ನೆ ವರ್ಷದ ಭೀಮ ಕೋರೆಂಗಾವ್ ವಿಜಯೋತ್ಸವ ಆಚರಣೆ ಮಾಡುತ್ತಿದ್ದು, ಈ ಬಾರಿ ದಿನಾಂಕ:1/1/2024 ರಂದು ಪರಿಶಿಷ್ಟ ಜಾತಿ ವರ್ಗಗಳ ಒಕ್ಕೂಟ ಮತ್ತು ಭೀಮ ಕೋರಂಗಾವ್ ವಿಜಯೋತ್ಸವ ಸಮಿತಿ ಕಲ್ಚರಲ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಭೀಮ ಕೊರಂಗಾವ್ ವಿಜಯದ ರಥವನ್ನು ಸಕಲೇಶಪುರದ ರಾಜಬೀದಿಯಲ್ಲಿ ಎಳೆಯುವ ಮೂಲಕ ಅದ್ದೂರಿಯಾಗಿ ನಡೆಯುತ್ತಿದ್ದು
ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಸಮುದಾಯದ ಬಾಂಧವರು ಬಂದು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿದ್ದಾರೆ.
ಸ್ಥಳ: ಟಾಟಾ ಕಂಪನಿ ಮೈದಾನ ಭೀಮ ಮಂದಿರ ಎದುರು ಕುಶಾಲನಗರ ರಸ್ತೆ, ಸಮಯ:ಬೆಳಗ್ಗೆ 10:30ಗಂಟೆ