ಸಕಲೇಶಪುರ : ಪುರಸಭೆಯ ಏಳನೇ ವಾರ್ಡಿನ ಸದಸ್ಯರಾದ ದಿ.ಜರಿನಾ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಪೊಲಿಸ್ ಬಿಗಿಬಂದುಬಸ್ತ್ ನೊಂದಿಗೆ ಮತದಾನ ನಡೆಯುತ್ತಿದ್ದು
ಈ ಸಂದರ್ಭದಲ್ಲಿ ಮತದಾನ ಕೇಂದ್ರಕ್ಕೆ ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಆಗಮಿಸಿ ಜೆಡಿಎಸ್ ಅಭ್ಯರ್ಥಿಯಾದ ಅರುಣ ಭಾರ್ಗವಿ ಎಸ್.ಕೆ.ಸೂರ್ಯ ಅವರ ಪರವಾಗಿ ಮತ ಹಾಕುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಸ್.ಡಿ.ಆದರ್ಶ್, ಮುಖೇಶ್ ಶೆಟ್ಟಿ, ಸ.ಬ.ಭಾಸ್ಕರ್, ಜಾತಹಳ್ಳಿ ಪುಟ್ಟಸ್ವಾಮಿ ಗೌಡ, ಪುರಸಭೆ ಮಾಜಿ ಅಧ್ಯಕ್ಷ ಕಾಡಪ್ಪ, ಜೆಡಿಎಸ್ ಅಲ್ಪಸಂಖ್ಯಾತ ಮುಖಂಡ ಎಸ್.ಎಸ್.ಅಸ್ಲಂ, ಪುರಸಭೆ ಸದಸ್ಯರಾದ ಜ್ಯೋತಿ ರಾಜಕುಮಾರ್, ಸರಿತಾ, ಸಮೀರ್,ಇಸ್ರಾರ್,ಉಮೇಶ್, ಮೋಹನ್, ಜರಿನಾ, ಪ್ರಜ್ವಲ್,ಆಟೋ ರಮೇಶ್, ತಿಮ್ಮಯ್ಯ, ಕಾರ್ತಿಕ್, ವಸಂತ್, ಕೀರ್ತಿ, ಪವನ್, ಪ್ರದೀಪ್ ಇತರರು ಇದ್ದರು.