ಸಕಲೇಶಪುರ :- ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕ ಮತ್ತು ಸಾನ್ವಿ ಪಬ್ಲಿಕ್ ಶಾಲೆ ಹೆತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಸಾನ್ವಿ ಪಬ್ಲಿಕ್ ಶಾಲೆ ಅವರಣದಲ್ಲಿ 29.12.2023 ನೇ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಹೋಬಳಿಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಕವಿ,ರಸ ಋಷಿ ಕುವೆಂಪು ಅವರ 119ನೇ ಜನುಮದಿನವನ್ನು ಮಕ್ಕಳು ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಹಾಗೂ ಸಂಭ್ರಮ, ಸಡಗರದಿಂದ ಆಚರಿಸೋಣ.

ಹಾಗಾಗಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಆಸಕ್ತರು, ಹೋಬಳಿಯ ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಿ ಕೊಡಬೇಕಾಗಿ ಕಸಾಪ ಹೆತ್ತೂರು ಘಟಕದ ಅಧ್ಯಕ್ಷರಾದ ರವಿಕುಮಾರ್ ಹಾಗೂ ಕಾರ್ಯದರ್ಶಿ ಅತ್ತಿಗನಹಳ್ಳಿ ಸುರೇಶ ಮತ್ತು ರೇಷ್ಮಾ ರಾಮಚಂದ್ರ ಸುರೇಶ ಹಾಗೂ ಪದಾಧಿಕಾರಿಗಳು ಮತ್ತು ಶಾಲಾ ಶಿಕ್ಷಕ ವರ್ಗದವರು ಹಾಗೂ ಆಡಳಿತ ವರ್ಗದವರು ಮನವಿ ಮಾಡಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *