ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ ಬಸವನಹುಳು ನಿರ್ವಹಣೆಗಾಗಿ ವಿಷದ ಉಂಡೆ ತಯಾರಿಕೆ ‘ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸುನಿತಾ ಟಿ. ಆರ್ ರವರು ಆಗಮಿಸಿದ್ದರು. ಬಸವನಹುಳುವಿನ ಜೀವನ ಚಕ್ರ , ಅದರ ಬಾಧೆ ಹಾಗೂ ವಿವಿಧ ನಿಯಂತ್ರಣ ಕ್ರಮಗಳ ಬಗ್ಗೆ ವಿದ್ಯಾರ್ಥಿನಿಯಾದ ಲೇಖಪ್ರಿಯ ರವರು ತಿಳಿಸಿದರು. ಬಸವನಹುಳುವಿನ ನಿರ್ವಹಣೆಯಲ್ಲಿ ಬಳಸುವ ವಿಷ ಉಂಡೆ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಯಾದ ಸತೀಶ್ ರವರು ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಸುನಿತಾ ಟಿ.ಆರ್ ರವರು ಬಸವನಹುಳುವಿನ ಬೆನ್ನಿನಲ್ಲಿರುವ ಶಂಖದಿಂದಾಗಿ, ಅವುಗಳ ನಿರ್ವಹಣೆಯಲ್ಲಿ ರಾಸಾಯನಿಕಗಳ ಬಳಕೆ ನಿರರ್ಥಕವೆಂದು ತಿಳಿಸಿದರು ಹಾಗೂ ವಿಷದ ಉಂಡೆಯ ಬಳಕೆ ಉತ್ತಮವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.