ಕುಕ್ಕೇಡಿಯಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಉಂಟಾದ ಸ್ಪೋಟದಲ್ಲಿ ಮೂವರು ಕಾರ್ಮಿಕರು ಸಾವನಪ್ಪಿದ್ದಾರೆ. ಈ ಕಾರ್ಮಿಕರಲ್ಲಿ ಹಾಸನ ಮೂಲದ ಚೇತನ್ ಕೂಡ ಒಬ್ಬರು, ಟಿವಿಯಲ್ಲಿ ಬಂದ ಸುದ್ದಿಯನ್ನು ಕೇಳಿ ಇದೀಗ ಚೇತನ್ ಕುಟುಂಬ ಬೆಳ್ತಂಗಡಿ ಆಗಮಿಸಿದ್ದಾರೆ.
ಬೆಳ್ತಂಗಡಿಯ ಕುಕ್ಕೇಡಿಯಲ್ಲಿ ನಡೆದ ಸ್ಪೋಟದಲ್ಲಿ ಹಾಸನ ಮೂಲದ 24 ವರ್ಷದ ಚೇತನ್ ಸಾವನಪ್ಪಿದ್ದಾರೆ. ಚೇತನ್ ಸಾವನ್ನಪ್ಪಿದ ಸುದ್ದಿಯನ್ನು ಟಿವಿಯಲ್ಲಿ ನೋಡಿ ಚೇತನ್ ಮನೆಯವರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಚೇತನ್ ತಂದೆ ಮಗ 5 ವರ್ಷದಿಂದ ಪಟಾಕಿ ತಯಾರಿಕಾ ಕೆಲಸ ಮಾಡುತ್ತಿದ್ದ, ಹಾಸನದಲ್ಲೇ ಪಟಾಕಿ ಕೆಲಸ ಮಾಡಿಕೊಂಡಿದ್ದ, ಇಲ್ಲಿಗೆ ಬಂದು 11 ದಿನಗಳು ಆಗಿತ್ತು ಅಷ್ಟೇ. ನಿನ್ನೆ ಬೆಳಗ್ಗೆ 10 ಗಂಟೆಗೆ ಕಾಲ್ ಮಾಡಿದ್ದೆ ಆಗ ಮಾತನಾಡಿದ್ದ ಎಂದರು.
ನನ್ನ ಮಗ ಕೆಲಸ ಮಾಡಿ ತಿಂಗಳು ಮೂರು ಸಾವಿರ ನೀಡುತ್ತಿದ್ದ, ಮಗನ ಸಾವಿನ ಬಗ್ಗೆ ಮನೆಯವರಿಗೆ ಇನ್ನೂ ತಿಳಿದಿಲ್ಲ ಎಂದ ಅವರು ನಾನು ಹಾರ್ಟ್ ಪೇಶಂಟ್ ಎಂದರು. ಮಗನ ಶವ ಪಡೆಯಲು ಪೊಲೀಸರು ನಮ್ಮ DNA ಟೆಸ್ಟ್ ಆಗಬೇಕು ಅಂತ ಹೇಳಿದ್ದಾರೆ ಎಂದು ಕಣ್ಣೀರಿಟ್ಟರು.