
ಪೊಲೀಸ್ ಪ್ರಕಟಣೆ :-ಹಾಸನ ಜಿಲ್ಲಾ ಪೊಲೀಸ್, ಹಾಸನ ಬಡಾವಣೆ ಪೊಲೀಸ್ ಠಾಣೆ.
1. ಮನೆಯಲ್ಲಿ ನಗದು, ಹಣ-ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿ ಇಡದೆ ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದು.
2. ರಾತ್ರಿ ವೇಳೆಯಲ್ಲಿ ಯಾರಾದರೂ ಬಾಗಿಲು ತಟ್ಟಿದರೆ ಕೂಡಲೇ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಪರಿಚಯವಿದ್ದರೆ ಮಾತ್ರ ಬಾಗಿಲು ತೆರೆಯುವುದು.
3. ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ವಾಹನಗಳ ನಂಬರುಗಳನ್ನು ಬರೆದಿಟ್ಟುಕೊಳ್ಳುವುದು. ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
4. ಹೊಸಬರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಸುತ್ತಾಡುವುದು ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
5. ಅಳವಡಿಸಿಕೊಳ್ಳುವುದು. … (CCTV & Door Aleram)
6. ಮನೆಗಳಿಗೆ ಡೋರ್ ಲಾಕ್‌ಗಳನ್ನು ಅಳವಡಿಸುವುದು.
7. ಸಾರ್ವಜನಿಕ ಸಭೆ ಅಥವಾ ಸಮಾರಂಭಗಳಲ್ಲಿ ಮಹಿಳೆಯರು ಚಿನ್ನಾಭರಣಗಳನ್ನು ಅತಿಯಾಗಿ ಪ್ರದರ್ಶನ ಮಾಡದೆ ಜಾಗೃತಿಯಿಂದ ಇರುವುದು.
8. ಚಿಕ್ಕಮಕ್ಕಳ ಮೇಲೆ ಬೆಲೆ ಬಾಳುವ ವಡವೆ ವಸ್ತುಗಳನ್ನು ಧರಿಸಿ ಶಾಲೆ ಅಥವಾ ಸಮಾರಂಭಗಳಿಗೆ ಕಳುಹಿಸಬಾರದು.
9. ಮನೆಯಲ್ಲಿ ಕಳ್ಳರಿಗೆ ಸಿಗುವ ರೀತಿಯಲ್ಲಿ ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡಬಾರದು.
10. ಗ್ರಾಮಗಳಲ್ಲಿ ಜ್ಯೋತಿಷ್ಯ ಹೇಳುವ ನೆಪದಲ್ಲಿ ಬಂದು ಮೋ ..ಸ ಮಾಡುವವರ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
11. ಚಿನ್ನಾಭರಣಗಳನ್ನು ಅಪರಿಚಿತ ವ್ಯಕ್ತಿಗಳಿಂದ ಪಾಲಿಷ್ ಮಾಡಿಸಬಾರದು.
12. ತಮ್ಮ ವಾಹನ ನಿಲ್ಲಿಸುವಾಗ ವಾಹನಗಳಿಗೆ ಲಾಕ್ ಮಾಡುವುದು.
13. ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ತಾವು ಧರಿಸಿರುವ ಒಡವೆ ಮತ್ತು ತಮ್ಮಲಿರುವ ಹಣದ ಬಗ್ಗೆ ಜಾಗರೂಕರಾಗಿರುವುದು.
14. ಮನೆ ಕೆಲಸಕ್ಕೆ ಬರುವವರ ವಿಳಾಸ ಮತ್ತು ಭಾವಚಿತ್ರ ಮತ್ತು ಮೊಬೈಲ್ ನಂಬರನ್ನು ಪಡೆಯುವುದು.
15. ಒಂಟಿ ಮನೆಯಲ್ಲಿರುವವರು ನೆಂಟರ ಮನೆಗೆ ಹೋಗುವಾಗ ಬೀಗ ಹಾಕಿ ಠಾಣೆಗೆ ತಿಳಿಸಿ ಹಾಗೂ ಫೋನ್ ನಂಬರ್ ಕೊಟ್ಟು ಹೋಗುವುದು ಅಗತ್ಯವಿದ್ದಲ್ಲಿ ಅಲರಮ್ ಅಳವಡಿಸಿಕೊಳ್ಳುವುದು.
16. ತಮ್ಮ ಎ.ಟಿ.ಎಂ. ಕಾರ್ಡ್ ನಂಬರ್ ಮತ್ತು ಪಿನ್ ನಂಬರನ್ನು ಯಾರಿಗೂ ಕೊಡಬಾರದು.
17. ರಾತ್ರಿ ವೇಳೆಯಲ್ಲಿ ಮನೆಯನ್ನು ಬಿಟ್ಟು ಹೋಗುವುದಾದರೆ ಯಾರನ್ನಾದರು ಮನೆಯಲ್ಲಿ ಉಳಿಯುವಂತೆ ಮಾಡುವುದು.
18. ಓ.ಟಿ.ಪಿ ನಂಬರ್ ಮತ್ತು ಬ್ಯಾಂಕ್ ಅಕೌ*ಟ್ ಮಾಹಿತಿಯನ್ನು ಯಾರಿಗೂ ಶೇರ್ ಮಾಡಬಾರದು.
19. ಅನುಮಾನಸ್ಪದ ಎ.ಪಿ.ಕೆ ಫೈಲ್ ಗಳನ್ನು ಮತ್ತು ಇತರೆ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು.
20. ಯಾವುದೇ ತುರ್ತು ಸಹಾಯಕ್ಕಾಗಿ ಪೊಲೀಸ್ ಸಹಾಯವಾಣಿ 112 ನಂಬರ್ ಗೆ ಕರೆ ಮಾಡುವುದು.
“ಜೀವ ಅತ್ಯಂತ ಅಮೂಲ್ಯವಾದದ್ದು. ನಿಮ್ಮ ಸಹಾಯಕ್ಕೆ ನಾವು ಇದ್ದೇವೆ, ನಮ್ಮೊಂದಿಗೆ ಸಹಕರಿಸಿ”ದೂರವಾಣಿ ಸಂಖ್ಯೆಗಳು:
ಹಾಸನ ಕಂಟ್ರೋಲ್ ರೂಂ: 08172-268845, 08172-265000 08172-268967, : 9480804730, 9480804747 ಪೊಲೀಸ್ ಉಪಾಧೀಕ್ಷಕರು, ಹಾಸನ ಉಪ ವಿಭಾಗ ಮೊ : 9480804720 / 112
