ಸಕಲೇಶಪುರ : ಯಂಗ್ ಸ್ಟಾರ್ ಕಪ್ಇವರ ವತಿಯಿಂದ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಬೈಕೆರೆ ಗ್ರಾಮದಲ್ಲಿ ನಡೆಸಲಾಯಿತು.

ಈ ಪಂದ್ಯಾವಳಿ ಕೂಟವನ್ನು ಬೈಕೆರೆ ಮಹೇಶ್ ಕಾಂಗ್ರೆಸ್ ಯುವ ಮುಖಂಡರು ಉದ್ಘಾಟನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

ಈ ಸಂದರ್ಭದಲ್ಲಿ ಬಿರಡಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ ಬಿ.ಬಿ. ಮಂಜುನಾಥ್ ಬೈಕೆರೆ, ಸುನಿಲ್ ಕಾಫಿ ಬೆಳೆಗಾರರು ಬೈಕೆರೆ ಹಾಗೂ ಜಯವರ್ಧನ್ ಮುಂತಾದವರು ಉಪಸ್ಥಿತರಿದ್ದರು

ಪ್ರಥಮ ಬಹುಮಾನದ ದಾನಿಗಳು ಬೈಕೆರೆ ಮಹೇಶ್ ಕಾಂಗ್ರೆಸ್ ಯುವ ಮುಖಂಡರು

ದ್ವಿತೀಯ ಬಹುಮಾನ ಪ್ರದೀಪ್ ಡಿಸೋಜ ಕಾಂಗ್ರೆಸ್ ಮುಖಂಡರು ದೊಡ್ಡನಾಗರ

ತೃತೀಯ ಬಹುಮಾನ ಸಚಿನ್ ಪ್ರಸಾದ್ ಜೆಡಿಎಸ್ ಮುಖಂಡರು ಸಕಲೇಶಪುರ

ಚತುರ್ಥ ಬಹುಮಾನ ಸುನಿಲ್ ಬೈಕೆರೆ ಕಾಫಿ ಬೆಳೆಗಾರರು.

ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಕಿರುಗುಂದ ,ದ್ವಿತೀಯ ಬಹುಮಾನವನ್ನು ಹಗಲಟ್ಟಿ, ತೃತೀಯ ಬಹುಮಾನವನ್ನು ಒಸ್ಸೂರು, ನಾಲ್ಕನೇ ಬಹುಮಾನವನ್ನು ಬೈಕೆರೆ ಪಡೆಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *