
ಸಕಲೇಶಪುರ:ಶುದ್ದ ಕಾಫಿಪುಡಿ ಸಮಸ್ಯೆ ಹಾಗೂ ಕಲಬೆರೆಕೆ ಅಡಿಗೆ ಎಣ್ಣೆಯಿಂದ ಮಲೆನಾಡಿಗರನ್ನು ರಕ್ಷಿಸುವ ಉದ್ದೇಶದಿಂದ ಕಸಬಾ ಬೆಳಗಾರರ ಸಹಭಾಗಿತ್ವದಲ್ಲಿ ಕುಂಬರಡಿ ಅಶೋಕ ಎಂಬುವವರು ಮೂಕಾಂಬಿಕ ಟ್ರೇಡರ‍್ಸ್ ಹೆಸರಿನ ಉದ್ಯಮ ಆರಂಭಿಸಲಾಗುತ್ತಿದೆ ಎಂದು ಕಸಬಾ ಬೆಳಗಾರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ತಾಲೂಕಿನಲ್ಲೆ ಕಾಫಿ ಬೆಳೆದರು ಚಿಕೋರಿ ಹಾವಳಿಯಿಂದಾಗಿ ಶುದ್ದ ಕಾಫಿ ದೊರೆಯದಾಗಿದೆ. ಇದರಿಂದ ಕಾಫಿಸೇವಿಸುವವರ ಸಂಖ್ಯೆ ಇಳಿಮುಖವಾಗಿದೆ ಇದನ್ನು ತಪ್ಪಿಸಿ ಶುದ್ದಕಾಫಿ ಪುಡಿ ನೀಡುವ ಉದ್ದೇಶದಿಂದ ಈ ಉದ್ಯಮ ಆರಂಭಿಸಲಾಗುತ್ತಿದೆ.
ಅಲ್ಲದೆ ಶುದ್ದ ಅಡಿಗೆ ಎಣ್ಣೆ,ಸ್ವಾಭಾವಿಕ ಸಂಭಾರಪದಾರ್ಥಗಳ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಈ ಉದ್ಯಮವನ್ನು ಪಟ್ಟಣದ ತೋಟದಗದ್ದೆ ಲೇಔಟ್ ಸಮೀಪ ಆರಂಭಿಸಲಾಗುತ್ತಿದ್ದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮಿಜಿ ಉದ್ಯಮದ ಉದ್ಘಾಟನೆ ಮಾಡಲಿದ್ದಾರೆಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಶೋಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಎಣ್ಣೆಗಳು ಪರಿಶುದ್ಧತೆಯಿಂದ ಕೂಡಿರುವುದು ಬಹಳ ವಿರಳ ಇದರಿಂದ ಜನರಲ್ಲಿ ಅತಿ ಹೆಚ್ಚು ಆರೋಗ್ಯ ಸಂಬಂಧಿತ ಕಾಯಿಲೆಗಳು ಗುಲ್ಬನಗೊಳ್ಳುತ್ತಿದೆ ಇದನ್ನು ಮನಗಂಡ ನಾನು ಸಕಲೇಶಪುರದ ಜನತೆಗೆ ನಮ್ಮಲ್ಲಿ ಬೆಳೆಯುವ ಸ್ವಾಭಾವಿಕ ಕಾಫಿಯನ್ನು ಜನರು ಬಳಸುವಂತಗಳು ಚಿಕ್ಕೋರಿ ಮುಕ್ತವಾಗಿ ಗ್ರಾಹಕರು ಬಳಸುವಂತಾಗಬೇಕೆಂದು ಹೇಳಿದರು
ಈ ನಿಟ್ಟಿನಲ್ಲಿ ಕಸಬ ಬೆಳಗಾರರ ಸಂಘದ ಸಹಯೋಗದಲ್ಲಿ ಸ್ವಾಭಾವಿಕ ಕಾಫಿ ಎಣ್ಣೆ ಮತ್ತು ಇನ್ನಿತರ ಅಡುಗೆಗೆ ಬಳಸುವಂತಹ ಮಸಾಲೆಗಳನ್ನು ತಯಾರಿಸುತ್ತೇವೆ ಎಂದು ಹೇಳಿದರು
ಈ ವೇಳೆ ರಾಖೇಶ್ ನೆಟ್ಟಹಳ್ಳಿ, ಮಧನ್ ಕುಮಾರ್, ಮೇಘರಾಜ್ ಇದ್ದರು.