
ಸಕಲೇಶಪುರ: ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಲು ಸಿಕ್ಕಿದ ಸೀಮೀತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಕೇವಲ ತಾವು ಪ್ರತಿನಿಧಿಸುವ ಆಲೂರು-ಸಕಲೇಶಪುರ ಕ್ಷೇತ್ರ ಮಾತ್ರವಲ್ಲದೆ ಇಡೀ ಮಲೆನಾಡು ಭಾಗದ ಕಾಡಾನೆಗಳ ಸಮಸ್ಯೆಗಳನ್ನು ವಿದಾನಸಭೆಯಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ಬಿಚ್ಚಿಟ್ಟರು.
ಸುಮಾರು 7 ನಿಮಿಷ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಸಕಲೇಶಪುರ ವಿದಾನಸಭೆ ಕ್ಷೇತ್ರದ ಹಲವು ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆರೆದಿಟ್ಟರು. ಸರ್ಕಾರ ಹಲವು ಗ್ಯಾರಂಟಿಗಳನ್ನು ಜನಸಾಮಾನ್ಯರಿಗೆ ತಂದಿರುವುದು ಶ್ಲಾಘನೀಯ ಆದರೆ ಅದರ ಅನುಷ್ಠಾನದಲ್ಲಿ ವಿಫಲವಾಗಿದೆ.
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಲಾಗಿದ್ದು ಆದರೆ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಬಸ್‌ಗಳ ಕೊರತೆ ಹೆಚ್ಚಾಗಿದ್ದು ದಿನನಿತ್ಯ ಬರಿ ಬಸ್‌ಗಳ ಕುರಿತು ದೂರು ಬರುತ್ತಿದೆ.
ಸಕಲೇಶಪುರ ಡಿಪೊದಲ್ಲಿರುವ ಬಸ್‌ಗಳು ಬಹುತೇಕ ಹಳೆಯದಾಗಿದ್ದು ಕೂಡಲೆ ಹೊಸ ಬಸ್‌ಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರ ಎಲ್ಲಾದಕ್ಕಿಂತ ಹೆಚ್ಚಾಗಿ ಆರೋಗ್ಯ ಭಾಗ್ಯ ನೀಡಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂಧ್ರಭಗಳಲ್ಲಿ ಅಮಾಯಕ ಮಹಿಳೆಯರು ಸಾವನ್ನಪ್ಪಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಂಜು ಅವರು ಸರಕಾರ ಜೀವ ಉಳಿಸುವ ಭಾಗ್ಯ ಒದಗಿಸುವಂತೆ ಒತ್ತಾಯಿಸಿದರು.
ಸಕಲೇಶಪುರ ವಿದಾನಸಬೆ ಕ್ಷೇತ್ರದ ವ್ಯಾಫ್ತಿಯಲ್ಲಿ ಕೆಲಸ ಮಾಡುತ್ತಿದ್ದ ಹೊಸದುರ್ಗ ಮೂಲದ ಯುವತಿಯೋರ್ವರು ಹೆರಿಗೆ ಸಂಧ್ರಭದಲ್ಲಿ ತೀವ್ರ ರಕ್ತಸಾವ್ರದಿಂದ ಮೃತಪಟ್ಟಿದ್ದಾರೆ. ಲುಬನಾ ಸಾಧಿಯ ಎಂಬ ಹೆಣ್ಣು ಮಗಳಿಗೆ ಹೆರಿಗೆ ಸಂದರ್ಭದಲ್ಲಿ ದಲ್ಲಿ ರಕ್ತಸಾವ್ರ ನಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಆ ಯುವತಿ ಇನ್ನು ಕೋಮಾದಲ್ಲಿದ್ದು ಲಕ್ಷಾಂತರ ರೂ ಖರ್ಚು ಮಾಡಬೇಕಾದ ಅನಿವಾರ್ಯತೆಗೆ ಅವರ ಪೋಷಕರು ಸಿಲುಕಿದ್ದಾರೆ.
ಇಷ್ಟೇ ಅಲ್ಲದೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ ಹಾಕಿ ತರಲಾಗಿರುವ ಸ್ಕ್ಯಾನಿಂಗ್ ಯಂತ್ರ ಆಪರೇಟ್ ಮಾಡುವ ರೇಡಿಯೊಲಾಗಿಸ್‌ಟ್ ಇಲ್ಲದ ಕಾರಣಕ್ಕೆ ಯಂತ್ರ ಅನಾಥವಾಗಿದೆ. ಅವಶ್ಯಕತೆ ಇರುವವರು ಖಾಸಗಿಯಲ್ಲಿ ಸಾವಿರಾರು ರೂಪಾಯಿ ತೆತ್ತು ಸ್ಕ್ಯಾನಿಂಗ್ ಮಾಡಿಸಬೇಕಾಗಿದೆ. ದಯವಿಟ್ಟು ಸಿಬ್ಬಂದಿಯನ್ನು ಕೊಡುವಂತೆ ಒತ್ತಾಯಿಸಿದರು.
ಮಲೆನಾಡು ಪ್ರದೇಶದಲ್ಲಿ ಕೆರೆಗಳ ಹೂಳುವ ತೆಗೆಯಲು ಆದ್ಯತೆ ನೀಡಿದರೆ ಬೇಸಿಗೆ ಮಾತ್ರವಲ್ಲ ವರ್ಷಪೂರ್ತಿ ದನಕರುಗಳಿಗೆ ಕುಡಿಯುವ ನೀರಿನ ಜೊತೆಗೆ ಕೃಷಿಗೂ ಅನುಕೂಲವಾಗಲಿದೆ ಎಂಬ ಕಳಕಳಿ ವ್ಯಕ್ತಪಡಿಸಿದರು.
ಅಲ್ಲದೆ ಎತ್ತಿನ ಹೊಳೆ ಯೋಜನೆಯಲ್ಲಿ ಈ ಹಿಂದೆ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿರಬಹುದು ಆದರೆ ಕ್ಷೇತ್ರದ ಹಲವು ಭಾಗಗಳು ಅಭಿವೃದ್ದಿಯಿಂದ ವಂಚಿತವಾಗಿದೆ. ಕೂಡಲೆ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹಾಜರಿರುವಾಗಲೇ ಮಹತ್ವದ ವಿಷಯ ಪ್ರಸ್ತಾಪಿಸುವ ಮೂಲಕ ಮತ್ತೊಮ್ಮೆ ಇಡೀ ಮಲೆನಾಡು ಬಾಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಮಂಜುನಾಥ್ ಯಶಸ್ವಿಯಾದರು.